Home ಜಿಲ್ಲೆ ನಕಲಿ ಜಾತಿ ಪ್ರಮಾಣ ಪಡೆದು ಸರ್ಕಾರದ 60 ಸಾವಿರ ಅನುದಾನ ಪಡೆದ ಗೀತಾಗೆ ಶಿಕ್ಷೆ

ನಕಲಿ ಜಾತಿ ಪ್ರಮಾಣ ಪಡೆದು ಸರ್ಕಾರದ 60 ಸಾವಿರ ಅನುದಾನ ಪಡೆದ ಗೀತಾಗೆ ಶಿಕ್ಷೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.10: ನಗರದ ರಾಮಯ್ಯ ಕಾಲೋನಿಯ  ಬಿ. ಗೀತಾ ತಾನು ಬಲಿಜ ಜಾತಿಗೆ ಸೇರಿದ್ದರು.ಆದರೆ ಸರ್ಕಾರದ ಅನುದಾನ ಪಡೆಯುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ತಹಶೀಲ್ದಾರ್ ಅವರಿಗೆ ನೀಡಿವಾಲ್ಮೀಕಿ ಜಾತಿ ಪ್ರಮಾಣ ಪತ್ರ ಪಡೆದು. ಬಳ್ಳಾರಿಯ ಗಾಂಧಿನಗರ ಪೋಲೀಸ್ ಠಾಣೆಯ ಮುಖ್ಯ ಪೇದೆ ಗೋಪಾಲಕೃಷ್ಣ ಹಾಗೂ ಇತರರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಸರ್ಕಾರದಿಂದ  60 ಸಾವಿರ ರೂ ಪರಿಹಾರ ಧನ ಪಡೆದಿದ್ದರು.

ಬಲಿಜ ಜಾತಿಯವರಾದರೂ ನಕಲಿ ದಾಖಲೆ ಮೂಲಕ ಎಸ್ಟಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಜನಾಂಗ ಹಾಗೂ ಸರ್ಕಾರಕ್ಕೆ ಮೋಸವಸಗಿರುವುದರ ಬಗ್ಗೆ

ದಾವಣಗೆರೆ ನಗರದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ಸಿಬ್ಬಂದಿ ತನಿಖೆ ನಡೆಸಿ ದೋಷರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದಬಳ್ಳಾರಿ ನಗರದ 1ನೇ ಅಪರ

ಜಿಲ್ಲಾ  ನ್ಯಾಯಾಲಯದಲ್ಲಿ ಪ್ರಭಾರ ನ್ಯಾಯಾಧೀಶ ಹೆಚ್.ಎ ಮೋಹನ್ ಅವರು ಆರೋಪಿಗೆ 2 ವರ್ಷಗಳ ಸಾದಾ ಕಾರಗೃಹ ಶಿಕ್ಷೆ ಮತ್ತು 30 ಸಾವಿರರೂ ದಂಡವನ್ನು ವಿಧಿಸಿ

ತೀರ್ಪು ನೀಡಿದ್ದಾರೆ.

 ಪ್ರಕರಣದ ತನಿಖಾಧಿಕಾರಿಗಳಾಗಿ ನಾಗರಾಜ ಪಿಐ ಬ್ರೂಸ್ ಪೇಟೆ ಪೊಲೀಸ್ ಠಾಣೆ., ಎ.ಕೃಷ್ಣನಾಯ್ತ ಪಿ.ಐ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ದಾವಣಗೆರೆ, ಹನುಮಂತಪ್ಪ ಪಿ.ಐನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ದಾವಣಗೇರೆ. ಮಾರ್ಗದರ್ಶಕರಾಗಿ ಬಿ.ರಘುಕುಮಾರ್ ಡಿ.ವೈ.ಎಸ್.ಪಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ಬಳ್ಳಾರಿ. ನ್ಯಾಯಾಲಯದ ಕರ್ತವನ್ನು ಸಿಬ್ಬಂದಿಗಳಾದ ಪಾಂಡುರಂಗ.ಕೆ, ವಿರೇಶ್ ಬಾಬು ಇವರುಗಳು ಕರ್ತವ್ಯ ನಿರ್ವಹಿಸಿರುತ್ತಾರೆ.ಶೇಖರಪ್ಪ ಹಾಗೂ  ಲಕ್ಷ್ಮಿದೇವಿ ಪಾಟೀಲ್ ಸರ್ಕಾರಿ ಅಭಿಯೋಜಕರು, ಅಭಿಯೋಜನೆ ಪರವಾಗಿ ವಾದ  ಮಂಡಿಸಿದ್ದರು