
ಸಂಜೆವಾಣಿ ವಾರ್ತೆ
ನಂಜನಗೂಡು.ಅ.24:- ದೇವರು ಒಬ್ಬನೇ ನಾಮ ಹಲವು ಭಕ್ತಿಯಿಂದ ದೇವರನ್ನು ಪೂಜಿಸಿ, ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ನೀವು ಬೇರೆಯವರಿಗೆ ಕೆಟ್ಟದ್ದನ್ನು ಬಯಸಿದರೆ ದೇವರು ನಿಮಗೆ ಎಂದು ಒಳ್ಳೆಯದು ಮಾಡುವುದಿಲ್ಲ ಎಂದುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹೇಳಿದರು.
ಅವರು ಇಂದು ತಮ್ಮ ಸ್ವಗ್ರಾಮ ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸಿದ್ದರಾಮನಹುಂಡಿಯ ರಂಗನಾಥಪುರದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದಂಡಿನ ಮಾರಮ್ಮ ದೇವಾಲಯದ ಮರು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ದೇವಾಲಯವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಗ್ರಾಮ ರಂಗನಾಥಪುರ ಶ್ರೀನಿವಾಸಪುರ ಮತ್ತು ವರುಣ ಕ್ಷೇತ್ರದ ಜನತೆ ನನ್ನ ಕಷ್ಟಕಾಲದಲ್ಲಿ ನನ್ನ ಕೈ ಹಿಡಿದು ನಡೆಸಿದ್ದೀರಿ ಎಂದಿಗೂ ನಿಮ್ಮ ನಿಮ್ಮ ಪ್ರೀತಿ ವಿಶ್ವಾಸ ಅಭಿಮಾನವನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹೇಳಿದರು.
ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ ನಂಬಿಕೆ ಆಧಾರದ ಮೇಲೆ ನಾವು ದೇವರನ್ನು ನಂಬುತ್ತೇವೆ ಭಕ್ತಿಯಿಂದ ಪೂಜೆ ಮಾಡಿ ಎಲ್ಲರಿಗೂ ಒಳ್ಳೆಯದನ್ನು ಮಾಡಪ್ಪ ಎಂದು ಕೇಳಿಕೊಳ್ಳುತ್ತೇವೆ ನಾವು ಬೇರೆಯವರಿಗೆ ಕೆಟ್ಟದ್ದನ್ನು ಬಯಸಿದರೆ ದೇವರು ಎಂದಿಗೂ ಕೆಟ್ಟದು ಬಯಸುವವರನ್ನು ಒಳ್ಳೆಯದು ಮಾಡುವುದಿಲ್ಲ ಆದ್ದರಿಂದ ಭಕ್ತಿಯಿಂದ ಪೂಜಿಸಿ ಎಲ್ಲರಿಗೂ ಒಳ್ಳೆಯದನ್ನು ಬಯಸಿದರೆ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದ ಸಿದ್ದರಾಮಯ್ಯನವರು ಇದೇ ವೇಳೆ ಬಸವಣ್ಣನವರ ವಚನವನ್ನು ಹೇಳುವ ಮೂಲಕ ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿಯ ಬಡವನಯ್ಯ ಎಂದು ಬಸವಣ್ಣನವರ ವಚನವನ್ನು ಹೇಳಿ ವರುಣ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಮಾದರಿ ಕ್ಷೇತ್ರವನ್ನಾಗಿಸಲು ಹೆಚ್ಚು ಶ್ರಮವಹಿಸಿದ್ದೇವೆ,
ಆದರೂ ಇನ್ನೂ ಸಹ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ ನಿಮ್ಮ ಈ ಪ್ರೀತಿ ಅಭಿಮಾನ ಸದಾ ನಮ್ಮ ಮೇಲೆ ಹೀಗೆ ಇರಲಿ ನಿಮ್ಮ ಋಣ ಭಾರವನ್ನು ತೀರಿಸಲು ನಾವು ಎಂದಿಗೂ ಸಾಧ್ಯವಿಲ್ಲ ಸ್ವಲ್ಪ ಮಟ್ಟಿಗಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳಲು ಶ್ರಮ ವಹಿಸುತ್ತೇವೆ ಎಂದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಸೆಯಂತೆ ನಾವು ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರೂ ಸಮನಾಗಿ ಬಾಳಬೇಕು ಎಂಬ ಬಯಕೆ ನಮ್ಮದಾಗಿದ್ದು ಆದ್ದರಿಂದಲೇ ನಾವು ಒಳ ಮೀಸಲಾತಿ ಜಾರಿಗೆ ತಂದು ಇದರಡಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಡಾಕ್ಟರ್ ಮತ್ತು ವಿವಿಧ ಸರ್ಕಾರಿ ಕೆಲಸದಲ್ಲಿ ಸೇರಿದ್ದಾರೆ ಅದಕ್ಕೆ ಕಾರಣ ಡಾ. ಬಿಆರ್ ಅಂಬೇಡ್ಕರ್ ಅವರು ಅವರ ಆಸೆಯಂತೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಶಿಕ್ಷಣ ಬಹಳ ಮುಖ್ಯ ನಾನು ಶಿಕ್ಷಣ ಪಡೆದಿರುವುದರಿಂದಲೇ ಉಪಮುಖ್ಯಮಂತ್ರಿಯಾಗಿ ವಿರೋಧ ಪಕ್ಷ ನಾಯಕರಾಗಿ ಎರಡು ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವನ್ನು ನೂರಕ್ಕೆ ನೂರು ಕೊಡಿಸಬೇಕು ಆಗ ಮಾತ್ರ ಈ ಒಂದು ಭೇದಭಾವ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಗ್ರಾಮಸ್ಥರಿಗೆ ಕರೆ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಹಾಗೂ ನಗರಾಭಿವೃದ್ಧಿ ಸಚಿವರು ಆದ ಡಾಕ್ಟರ್ ಎಸ್ . ಯತೀಂದ್ರ ಸಿದ್ದರಾಮಯ್ಯ, ರವರು ಮಾತನಾಡಿ ನಮ್ಮ ತಂದೆ ಸಿದ್ದರಾಮಯ್ಯನವರು ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾಗಿ ಉಪಮುಖ್ಯಮಂತ್ರಿಗಳಾಗಿ ಎರಡು ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ವರುಣ ವಿಧಾನಸಭಾ ಕ್ಷೇತ್ರದ ಜನತೆಗೂ ಹಾಗೂ ಮೈಸೂರು ಜಿಲ್ಲೆಯ ಜನತೆಗೂ ನಾವು ಸದಾ ಆಭಾರಿಯಾಗಿದ್ದೇವೆ ನಿಮ್ಮ ಪ್ರೀತಿಯ ಅಭಿಮಾನ ವಿಶ್ವಾಸ ಹೀಗೆ ಇರಲಿ ಎಂದು ಹೇಳಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೂಡಲೇ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಜಾರಿಗೆ ತಂದು ನುಡಿದಂತ ನಡೆದಿದ್ದಾರೆ ಎಂದು ಹೇಳಿದ ಸಚಿವರು ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ ಆದರೂ ಅವರ ತೇಜವದೆಗೆ ಅವರ ಹೆಸರಿಗೆ ಮಸಿ ಬೆಳೆಯಲು ಕೆಲವರು ಕಾಣದ ಕೈಗಳು ಕುತಂತ್ರ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು ಇಡೀ ರಾಜ್ಯದ್ಯ ಸಿದ್ದರಾಮಯ್ಯನವರ ಪರವಾಗಿದ್ದಾರೆ ನಿಮ್ಮ ಆಶೀರ್ವಾದದಿಂದ ಸಿದ್ದರಾಮಯ್ಯ ಅವರನ್ನು ಯಾರೂ ಕೂಡ ಅಲ್ಲಾಡಿಸಲು ಸಾಧ್ಯವಿಲ್ಲ ಅವರ ಹೆಸರಿಗೆ ಕೆಟ್ಟದ್ದನ್ನು ಮಾಡಬೇಕು ಎಂದರೆ ಅದು ಸಾಧ್ಯವಿಲ್ಲ ಎಂದು ಕುತಂತ್ರಿಗಳಿಗೆ ಯತೀಂದ್ರ ಸಿದ್ದರಾಮಯ್ಯನವರು ತಿರುಗೇಟು ನೀಡಿದರು.
ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವವಾಣಿ ಪತ್ರಿಕೆಯ ಪ್ರದಾನ ಸಂಪಾದಕ ವಿಶ್ವೇಶ್ವರ ಭಟ್, ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆಂಪಿರಯ್ಯ ಟಿ ನರಸೀಪುರದ ಮರೆಯ ಎಪಿಎಂಸಿ ಮಾಜಿ ಸದಸ್ಯ ಸಿದ್ದರಾಮಯ್ಯನ ಹುಂಡಿ ಬಸವರಾಜು ಸಿದ್ದರಾಮ ತಾಲೂಕ ಪಂಚಾಯತಿ ಮಾಜಿ ಸದಸ್ಯ ಮುದ್ರಾಮೇಗೌಡ ನಾಡನಹಳ್ಳಿ ರವಿ ರಂಗನಾಥಪುರ ಮುಖಂಡ ಪುಟ್ಟಣ್ಣ ಸುತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಳಿ ರಂಗಸ್ವಾಮಿ ತಾಲೂಕು ದಂಡಾಧಿಕಾರಿಗಳಾದ ಮಹೇಶ್ ಕುಮಾರ್ ಆರ್ ಐ ಯೋಗೇಂದ್ರ ಕುಮಾರ್ ಹುಣಸೂರು ಬಸವಣ್ಣಸೇರಿದಂತೆ ಅಕ್ಕ ಪಕ ಗ್ರಾಮದ ಮುಖಂಡರು ಗ್ರಾಮದ ಯಜಮಾನರು ಹಾಜರಿದ್ದು
ರಂಗನಾಥಪುರದ ಶ್ರೀ ದಂಡಿನ ಮಾರಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಲು ಸ್ವಗ್ರಾಮ ಸಿದ್ದರಾಮನ ಹುಂಡಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆಗ್ರಾಮಸ್ಥರು ಬಾರಿ ಗಾತ್ರದ ಹೂವಿನ ಹಾರವನ್ನು ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದರು. ಬಳಿಕ ಗ್ರಾಮದಿಂದ ದೇವಾಲಯದ ಹೊರಗೆ
ತೆರೆದ ವಾಹನದ ಮೆರವಣಿಗೆಯಲ್ಲಿ ಕರೆದೊಯ್ದ ಗ್ರಾಮಸ್ಥರು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿ ಸಂಭ್ರಮಿಸಿದರು.
























