
ಸುಳ್ಯ:ರೆಪ್ಕೋ ಬ್ಯಾಂಕ್ ಸುಳ್ಯ ಶಾಖೆ ಮತ್ತು ರಿಪಾಟ್ರಿಯೇಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ರಿಪಾಟ್ರಿಯೇಟ್ಸ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಅನುದಾನ ವಿತರಣೆ ಸುಳ್ಯ ಗಿರಿದರ್ಶಿನಿ ಮರಾಟಿ ಸಭಾಭವನದಲ್ಲಿ ನಡೆಯಿತು.
ಸಮಾರಂಭವನ್ನು ರೆಪ್ಕೋ ಬ್ಯಾಂಕ್ ಅಧ್ಯಕ್ಷ ಇ. ಸಂತಾನಂ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ರೆಪ್ಕೋ ಬ್ಯಾಂಕ್ ಫೈನಾನ್ಸ್ ಅಧ್ಯಕ್ಷ ಸಿ.ತಂಗರಾಜು, ಸುಳ್ಯ ರೆಪ್ಕೋ ಬ್ಯಾಂಕ್ ಶಾಖಾ ಮೆನೇಜರ್ ರಾಜೇಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೀಕ್ಷಾ ಕುಕ್ಕಂದೂರು, ಕಿಶನ್ ದರ್ಖಾಸ್ತು, ಶ್ಯಾಮ್ ಕೃಷ್ಣ ಕೋಣಾಜೆ, ಸೌರವ ಕೃಷ್ಣ ಕೋಣಾಜೆ, ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಣಪತಿ ಎ.ಎಸ್.ಮತ್ತು ವಿಮಲ ದಂಪತಿಯನ್ನು ಸನ್ಮಾನಿಸಲಾಯಿತು. ಅಲ್ಲದೇ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ಸಹಾಯಧನ ನೀಡಿದ ರೆಪ್ಕೋ ಬ್ಯಾಂಕ್ ಅಧ್ಯಕ್ಷ ಮತ್ತು ಫೈನಾನ್ಸ್ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ರಿಪಾಟ್ರಿಯೇಟ್ಸ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಶಿವಕುಮಾರ್ ಕೂಟೇಲು ಪ್ರಾಸ್ತಾವಿಕ ಮಾತನಾಡಿದರು. ರೆಪ್ಕೋ ಬ್ಯಾಂಕ್ ಉದ್ಯೋಗಿ ತನೋಜ್ ಸ್ವಾಗತಿಸಿ, ದಯಾಳನ್ ಬಾರ್ಪಣೆ ವಂದಿಸಿದರು. ಜ್ಯೋತಿ, ಪೂವೇಂದ್ರ ಕೂಟೇಲು, ರಮೇಶ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು


































