Home ಜಿಲ್ಲೆ ಯೋಗದಿಂದ ರೋಗ ದೂರ:ಪಾಟೀಲ

ಯೋಗದಿಂದ ರೋಗ ದೂರ:ಪಾಟೀಲ

ತಾಳಿಕೋಟೆ:ಜೂ.೨೩: ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯಲ್ಲಿ ರವಿವಾರರಂದು ವಿಶ್ವ ಅಂತರಾಷ್ಟಿçÃಯ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಸಮಯದಲ್ಲಿ ಎಸ್.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಇಂದು ಒಂದೇ ದಿನ ಯೋಗ ಮಾಡಿದರೆ ಸಾಲದು ನೀವು ರೋಗದಿಂದ ವಿಮುಖರಾಗಲು ಪ್ರತಿದಿನ ಯೋಗ ಅವಶ್ಯಕವಾಗಿದೆ ಯೋಗದಿಂದ ಸದೃಢ ದೇಹ, ಉತ್ತಮ ಆರೋಗ್ಯ ಜೊತೆಗೆ ಜ್ಞಾಪಕ ಶಕ್ತಿ ಎಂಬುದು ಹೆಚ್ಚಾಗಲಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಚಿನ ಪಾಟೀಲ ಅವರು ಯೋಗದ ಮಹತ್ವ ಕುರಿತು ವಿವರಿಸಿದರು.
ಬಿಪಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಪರೇಡ ಮುಖಾಂತರ ಸಂಸ್ಥೆಯ ಅಧ್ಯಕ್ಷರನ್ನು ವೇದಿಕೆಗೆ ಕರೆತಂದು ಗೌರವ ಸಲ್ಲಿಸಿದರು. ಯೋಗದ ಆಯಾಮಗಳನ್ನು ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಿವಕುಮಾರ ನಾಯಕ, ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಮ್.ಎಸ್.ರಾಯಗೊಂಡ ನೆರವೇರಿಸಿಕೊಟ್ಟರು,
ಈ ಸಮಯದಲ್ಲಿ ಆಡಳಿತಾಧಿಕಾರಿಗಳಾದ ಕಿರಣ ಪಾಟೀಲ, ಬಿಪಿಇಡಿ ಕಾಲೇಜಿನ ಉಪನ್ಯಾಸಕರಾದ ಶರಣು ಬಿರಾದಾರ,
ಸಾಬಣ್ಣ ಮೇಟಿ, ಪಿಯು ಕಾಲೇಜಿನ ಉಪನ್ಯಾಸಕರಾದ ಎಸ್.ಬಿ.ಮಂಗ್ಯಾಳ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜೆ.ಎಮ್.ಕೊಣ್ಣೂರ. ಶ್ರೀಎಚ್.ಎಸ್.ಪಾಟೀಲ ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಸ್ಥ ಉಮೇಶ ಅಬ್ಬಿಗೇರಿ, ಶ್ರೀಮತಿ ಮೀರಾ ದೇಶಪಾಂಡೆ, ಎಸ್.ಎಸ್.ವಿದ್ಯಾ ಸಂಸ್ಥೆಯ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಎಸ್.ಎಸ್.ವಿದ್ಯಾಸಂಸ್ಥೆಯ ಸಮಸ್ತ ವಿದ್ಯಾರ್ಥಿಗಳು, ಬಿಪಿಇಡಿ ಪ್ರಶಿಕ್ಷಣಾರ್ಥಿಗಳು
ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಸಿ.ಗುಡಗುಂಟಿ ನಿರೂಪಿಸಿದರು. ಬಿ.ಆಯ್.ಹಿರೇಹೊಳಿ ವಂದಿಸಿದರು.