
ಧಾರವಾಡ,ಆ೨೬: ಮಾಧ್ಯಮಿಕ ಹಂತದಲ್ಲಿ ಹಿಂದಿ ಬದಲಾಗಿ ಂI ತಂದಿರುವ ತಪುö್ಪ ನಿರ್ಧಾರ ಮತ್ತು ೧೫ ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದಿ ಭಾಷಾ ಶಿಕ್ಷಕರನ್ನು ಪರಿಗಣಿಸದೇ ಇರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕವಿವಿ ಹಿಂದಿ ಪ್ರಾಧ್ಯಾಪಕರ ಸಂಘ, ಧಾರವಾಡ ಜಿಲ್ಲಾ ಹಿಂದಿ ಭಾಷಾ ವಿದ್ಯಾರ್ಥಿಗಳ ಸಂಘ, ಧಾರವಾಡ ಜಿಲ್ಲಾ ಹಿಂದಿ ಭಾಷಾ ಅತಿಥಿ ಶಿಕ್ಷಕರ ಸಂಘ, ಧಾರವಾಡ ಜಿಲ್ಲಾ ಹಿಂದಿ ಭಾಷಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟಕರಾದ ಡಾ. ಎಲ್.ಪಿ. ಲಮಾಣಿ, ಡಾ. ಕವಿತಾ ಚಾಂದಗುಡೆ, ಡಾ. ಶೇಖ್, ಡಾ. ರಾಜಕುಮಾರ ನಾಯ್ಕ, ಡಾ. ಶೀಲಾ ಭಂಡಾರಿ, ಡಾ. ನೀಲಾಂಬಿಕಾ ಪಾಟೀಲ, ಡಾ. ಜಯಲಕ್ಷಿ÷್ಮ ಪಾಟೀಲ, ಡಾ. ಶಕೀಲ ಮುಸ್ತಫಾ, ಡಾ. ಮಮತಾ ಶಿರಗಂಬಿ, ಡಾ. ವೀರೇಶ್ ಬಿಸನಾಳ, ಡಾ. ಮುಕ್ತಾರ ಗುಳಗುಂಡಿ, ಸತೀಶ್ ಭಾಸ್ಕರ, ಮಂಜುನಾಥ ಜಿ, ಅರುಣ ಪ್ರತೀಕ ಮಾಳಿ, ಮಹೇಶ್ ರಾಠೋಡ ಹಾಗೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಮನವಿ ಸಲ್ಲಿಸಿದರು.































