Home ಜಿಲ್ಲೆ ಕಲಬುರಗಿ ಕರುಣೇಶ್ವರ ನಗರ ಕೋರಿಸಿದ್ಧೇಶ್ವರ ಮಠದಲ್ಲಿ ನೂತನಮೂರ್ತಿ ಅನಾವರಣ

ಕರುಣೇಶ್ವರ ನಗರ ಕೋರಿಸಿದ್ಧೇಶ್ವರ ಮಠದಲ್ಲಿ ನೂತನಮೂರ್ತಿ ಅನಾವರಣ

ಕಲಬುರಗಿ,ನ.25: ಗುರುಮುಟ್ಟಿ ಗುರುವಾದ, ಕೋರಿಸಿದ್ದೇಶ್ವರರು ಭಕ್ತರ ಕೋರಿದ ಬೇಡಿಕೆ ಈಡೇರಿಸುವ ಸಿದ್ಧಿಪುರುಷ ಕೋರಿಸಿದ್ಧೇಶ್ವರರ ಹೊಸಮೂರ್ತಿ,ಕಳಸಾರೋಹಣ ಹಾಗೂ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಮೂರ್ತಿ ಅನಾವರಣ ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿ ನೇರವೇರಿತು.
ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದ ನಾಲವಾರ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು ಕಲಬುರಗಿ ಕರುಣೇಶ್ವರ ನಗರ ಶಾಖಾಮಠ ಶ್ರೀ ಕೋರಿಸಿದ್ಧೇಶ್ವರರ ದೇವಾಲಯ ಸುಸಜ್ಜಿತವಾಗಿ ನಿರ್ಮಿಸುವ ಮೂಲ ಕಾರಣ ಸದರಿ ನಗರದ ಸಕಲ ಭಕ್ತರ ತನುಮನದಿಂದ ಸಾಧ್ಯವಾಯಿತುಎಂದು ಹೇಳಿದರು.
ಬರಲಿರುವ ದಿನಗಳಲ್ಲಿ ಈ ಬಡಾವಣೆಯ ಸದ್ಭಕ್ತರು ಏಕತೆಯ ಭಾವನೆಯಿಂದ ಕೋರಿಸಿದ್ಧೇಶ್ವರರ ಮಠದ ಅಭಿವೃದ್ಧಿಗೆ ಶ್ರಮಿಸಿದರೆ, ಇದೊಂದು ಮಠ ಕೈಲಾಸವಾಗಿ ಗೋಚರಿಸುವುದು ಎಂದು ನಾಲವಾರ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕರಡಕಲ್ಲದ ಕೋರಿಸಿದ್ಧೇಶ್ವರ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು ,ಬಡಾವಣೆಯ ಹಿರಿಯರು,ಯುವಕರು ,ಮಹಿಳೆಯರು ಉಪಸ್ಥಿತರಿದ್ದರು.