Home ಜಿಲ್ಲೆ ಸಸಿ ಹಾಗೆ ಹೆಣ್ಣುಮಕ್ಕಳ ಜೀವನ :ಡಾ.ಎಸ್ ವ್ಹಿ ಪಾಟೀಲ

ಸಸಿ ಹಾಗೆ ಹೆಣ್ಣುಮಕ್ಕಳ ಜೀವನ :ಡಾ.ಎಸ್ ವ್ಹಿ ಪಾಟೀಲ

ಬೀದರ:ಸಾಧನೆ ಮಾಡುವ ಕಿಚ್ಚಿನ ಜೊತೆಗೆ ಮೌಲ್ಯಯುತವಾದ ಸಂಸ್ಕಾರ, ಶಿಕ್ಷಣ ನಿಮ್ಮ ಜೀವನದಲ್ಲಿ ಆತ್ಮ ವಿಶ್ವಾಸ ಮೂಡಿಸಬಲ್ಲುದೆಂದು ತೋಟಗಾರಿಕಾ ಕಾಲೇಜಿನ ಡೀನ್ ಡಾ ಎಸ್ ವ್ಹಿ ಪಾಟೀಲ ನುಡಿದರು.
ವಚನ ಚಾರಿಟೇಬಲ್ ಸೊಸೈಟಿ ಹಾಗೂ ತೋಟಗಾರಿಕಾ ಕಾಲೇಜಿನ ಎನ್ ಎಸ್ ಘಟಕದ ಸಹಯೋಗದೊಂದಿಗೆ ಇಂದು ಹದಿಹರೆಯದ ಹೆಣ್ಣು ಮಕ್ಕಳ ಒಂದು ದಿವಸದ ಕಾರ್ಯಾಗಾರ ಸಸಿಗೆ ನೀರೆರೆದು ಉದ್ಘಾಟಿಸಿ ಮುಂದುವರೆದು.. ಹೆಣ್ಣು ಮಕ್ಕಳ ಆರೋಗ್ಯ ಬಲು ಸೂಕ್ಷ್ಮ. ಯಾವುದೇ ತರಹದ ದೇಹದಲ್ಲಾದ ಬದಲಾವಣೆಗಳು ಪಾಲಕರ ಮುಂದೆ ಹೇಳಿ ಪರಿಹಾರ ಕಂಡು ಕೊಳ್ಳಬೇಕು.
ವಾಸ್ತವಿಕವಾಗಿ ಶಿಕ್ಷಕ, ವೈದ್ಯ, ಪಾಲಕರ ಸಮ್ಮುಖದಲ್ಲಿ ಸುಳ್ಳು ಹೇಳಬಾರದು. ಇಂದು ಅನೇಕ ಮಕ್ಕಳು ಮೊಬೈಲ್ ತಂತ್ರಾಂಶಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಬೆಳೆಯುವ ಪೈರಿಗೆ ಕೊಡಲಿ ಪೆಟ್ಟು ಹಾಕಿದ್ದಂಗ, ಯುವಕರಾದವರು ಸ್ಪಲ್ಪ ಮಟ್ಟಿಗೆ ಚಿಂತನ ಮಾಡುವ ಪ್ರವರ್ತಿ ಬೆಳೆಸಿಕೊಳ್ಳಬೇಕು. ವ್ಯಕ್ತಿ ಹಂತ ಹಂತವಾಗಿ ಬೆಳವಣಿಗೆ ಆಗಬೇಕು. ದಿನಾಲು ನಾವೇನು ಊಟ ಮಾಡುತ್ತಿದ್ದೇವೆಂಬ ಸಾಮಾನ್ಯ ಜ್ಞಾನ ಇರಲೇ ಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಅನಿವಾರ್ಯ ಆದರೆ ಅದೇ ಪ್ರಾಮುಖ್ಯವಲ್ಲ. ಅದರ ಜೊತೆ ಜೊತೆಗೆ ಆಟ, ಸಾಂಸ್ಕøತಿಕ, ಕಲೆ ಸಾಹಿತ್ಯದೊಡನೆ ಸ್ವಲ್ಪಮಟ್ಟಿಗೆ ಸಮಯ ಕಳೆದರೆ ನಮ್ಮ ದಿನದ ಕೆಲವು ಹೊತ್ತುಗಳ ಆಯಾಸ ದೂರವಾಗಲು ಸಾಧ್ಯ. ನಮ್ಮ ಜೊತೆಗೆ ಒಳ್ಳೆ ಸಂಭಂಧಗಳು ಬೆಸೆದು ಕೊಂಡರೆ ಸಮಗ್ರವಾಗಿ ಅಭಿವೃದ್ಧಿ ಯಾಗಿ ಹೆಣ್ಣು ಮಕ್ಕಳು ಸಮಾಜದ ಕಣ್ಣು ಎಂಬ ಭಾವನೆ ಮೂಡಲು ಈ ಕಾರ್ಯಾಗಾರ ಪ್ರೇರಣೆ ನೀಡಲೆಂದು ಶುಭ ಹಾರೈಸಿ ಸುಮಾರು ಎಪ್ಪತ್ತು ಜಿಲ್ಲೆಯ ಹೆಣ್ಣು ಮಕ್ಕಳು ಈ ತರಬೇತಿಗೆ ಬಂದು ಹಾಜರಾಗಿರುವುದು ಸಂತಸ. ವಚನ ಚಾರಿಟೇಬಲ್ ಸೊಸೈಟಿಯ ಕಾರ್ಯ ಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ಡಾ ಶಿವಶಂಕರ ಟೋಕರೆ.. ಇಂದು ಮಕ್ಕಳು ನಮ್ಮ ಪಾಲಿನ ಆಸ್ತಿ. ಅವರ ಬದುಕಿನ ಬವಣೆ ನೀಗಿಸುವ ಜವಾಬ್ದಾರಿ ನಮ್ಮದು. ಸಂಸಾರದಲ್ಲು ಇನ್ನು ಗಂಡು ಹೆಣ್ಣು ಎಂಬ ಭೇದಭಾವ ಇದೆ. ಇದನ್ನು ಹೋಗಲಾಡಿಸಲು ನಾವಿಂದು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ವಿಶೇಷ ಕಾರ್ಯಗಾರ ಆಯೋಜಿಸಿ ಆತ್ಮ ವಿಶ್ವಾಸ ಹೆಚ್ಚಿಸುವ ದಿಶೆಯಲ್ಲಿ ದಾಪುಗಾಲು ಹಾಕಿದ್ದೇವೆ. ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಶರಣರ ತತ್ತ್ವ ಅನುμÁ್ಠನಕ್ಕೆ ತರಬೇಕಾಗಿದೆ.
ಆಕೆ ತಾಯಿ, ಅಕ್ಕ, ತಂಗಿ, ಹೆಂಡತಿ ಯಾಗಿ ವಾತ್ಸಲ್ಯದ ಧಾರೆ ಎರಯುವ ಮಾತೆಯ ಸಮಗ್ರವಾದ ಅಭಿವೃದ್ಧಿ ನಮ್ಮ ಧ್ಯೇಯ ಮಂತ್ರವಾಗಬೇಕೆಂದರು. ಈ ಕಾರ್ಯಾಗಾರಕ್ಕೆ ಬೀದರ ಜಿಲ್ಲೆಯ ಎಲ್ಲ ತಾಲೂಕಿನ ಮಕ್ಕಳು ಜೊತೆಗೆ ತೋಟಗಾರಿಕೆ ಕಾಲೇಜಿನ ಹದಿನೆಂಟು ವರ್ಷದ ಕೆಳಗಿನ ಮಕ್ಕಳು ಇಲ್ಲಿ ಹಾಜರಾಗಿರುವುದು ಒಂದು ವಿಶೇಷ.
ಒಂದು ದಿನದ ಕಾರ್ಯಗಾರಕ್ಕೆ ಉದಗೀರ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ ಸತ್ಯಕ್ಕ ದೈಹಿಕ ಬೆಳವಣಿಗೆ ಹಾಗೂ ಕ್ಷೇಮ,
ಬ್ರಿಮ್ಸ ಕಾಲೇಜಿನ ಡಾ ಪೂರ್ಣಿಮಾ ಮಿಟಕಾರಿ ಮಾನಸಿಕ ಆರೋಗ್ಯ ಮನಸ್ಸು ಹಾಗೂ ಭಾವನಾತ್ಮಕ ಕ್ಷೇಮ, ಶಿಕ್ಷಣ ತಜ್ಞ ಡಾ ಶಿವಲಿಂಗ ಹೇಡೆ
ವ್ಯಕ್ತಿತ್ವ ವಿಕಾಸ ವಿಷಯಗಳ ಮೇಲೆ ಉಪನ್ಯಾಸ ಜೊತೆಗೆ ಮಕ್ಕಳ ಜೊತೆಗೆ ಪರಿಪೂರ್ಣವಾದ ಸಂವಾದ ನಡೆಸಿ ಅವರ ಅನೇಕ ಅಂತರಿಕ ಸಮಸ್ಯೆಗಳಿಗೆ ಸೂಕ್ತವಾದ ಉತ್ತರ ನೀಡಿದರು. ಕೊನೆಯಲ್ಲಿ ಮಕ್ಕಳ ಪಾಲಕರ ಜೊತೆಗೆ ಸಂವಾದ ಕೂಡ ನಡೆಯಿತು.
ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ಮೊದಲಿಗೆ ನಿರ್ದೇಶಕರಾದ ರೇಖಾ ನಿಂಗದಳ್ಳಿ ಪ್ರಾರ್ಥನೆ ನಡೆಸಿ ಕೊಟ್ಟರೆ ನಿರ್ದೇಶಕರಾದ ಶಿವಕುಮಾರ ಸಾಲಿ ಸ್ವಾಗತಿಸಿದರೆ ಸಹಾಯಕ ಪ್ರಾಧ್ಯಾಪಕರಾದ ಡಾ ವಿಜಯಮಹಾಂತೇಶ ವಂದಿಸಿದರೆ ಡಾ ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಣೆ ಮಾಡಿದರೆ, ಪ್ರಾಸ್ತಾವಿಕವಾಗಿ ಡಾ ಶೀಲವಂತ ನಾವದಗೇರೆ ಹಲವು ವಿಚಾರ ಪ್ರಸ್ತುತ ಪಡಿಸಿದರು. ಕಾರ್ಯಾಗಾರದಲ್ಲಿ ಅಲ್ಲಮಪ್ರಭು ನಾವದಗೇರೆ, ಡಾ ಕವಿತಾ ರಾಠೋಡ, ಪ್ರಕಾಶ ಗಂದಿಗುಡೆ, ಸಿದ್ರಾಮ ಸೀತಾ, ಶ್ರೀಕಾಂತ ಲಕ್ಕಶೆಟ್ಟಿ, ಸಂಜೀವಕುಮಾರ ಪಾಟೀಲ ಹಾಜರಿದ್ದು ಕಾರ್ಯಗಾರ ಯಶಸ್ವಿಯಾಗಿ ನೆರವೇರಿಸಿದರು.