Home ಜಿಲ್ಲೆ ಕ್ರೀಡಾಕೂಟ: ಹೆಸ್ಕಾಂ ಸಾಧನೆ

ಕ್ರೀಡಾಕೂಟ: ಹೆಸ್ಕಾಂ ಸಾಧನೆ

ಹುಬ್ಬಳ್ಳಿ,ನ೨೫: ಜೆಸ್ಕಾಂ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಲಾಗಿದ್ದ ಜೆಸ್ಕಾಂ ಕ್ರೀಡಾಕೂಟ-೨೦೨೬ರಲ್ಲಿ ಹೆಸ್ಕಾಂ ತಂಡ ಗಮನಾರ್ಹ ಸಾಧನೆ ತೋರಿದ್ದು, ನಾಲ್ಕು ಕ್ರೀಡಾ ವಿಭಾಗಗಳಲ್ಲಿ ಮೇಲುಗೈ ಸಾಧಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಹೆಸ್ಕಾಂ ತಂಡವು ಪುರುಷರ ಚೆಸ್ ಮತ್ತು ಟೇಬಲ್ ಟೆನ್ನಿಸ್ ಹಾಗೂ ಮಹಿಳೆಯರ ಟೇಬಲ್ ಟೆನ್ನಿಸ್, ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಸಾಧಿಸುವ ಮೂಲಕ ಹೆಮ್ಮೆ ತಂದಿದೆ.


ಹೆಸ್ಕಾA ತಂಡದ ಸಾಧನೆಗೆ ಕ್ರೀಡಾಪಟುಗಳು, ತರಬೇತುದಾರರು, ತಂಡದ ವ್ಯವಸ್ಥಾಪಕರು ಹಾಗೂ ಪ್ರೋತ್ಸಾಹ ನೀಡಿದ ಅಧಿಕಾರಿಗಳ ಸಹಕಾರ ಮಹತ್ವದ್ದಾಗಿದೆ ಎಂದು ಕ್ರೀಡಾ ಕಾರ್ಯದರ್ಶಿ ಮಂಜುನಾಥ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.