
ಕಲಬುರಗಿ,ಅ.9-ಸಾಫ್ಟವೇರ್ ಇಂಜಿನಿಯರ್ ಒಬ್ಬರಿಗೆ 3,97,626 ರೂ.ಸೈಬರ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿರುವ ಸಾಫ್ಟವೇರ್ ಇಂಜಿನಿಯರ್ ದತ್ತರಾಜ ಹಿರೇಮಠ ಅವರಿಗೆ ವಂಚನೆ ಮಾಡಲಾಗಿದೆ.
ಇವರ ಮೊಬೈಲ್ ನಂಬರ್‍ಗೆ ಅಪರಿಚಿತ ಸೈಬರ್ ವಂಚಕನೊಬ್ಬ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡಿ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 3,97,626 ರೂ.ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದು, ದತ್ತರಾಜ ಅವರು ಈ ಸಂಬಂಧ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.























