Home ಮುಖಪುಟ ಸುದ್ದಿ ಕ್ಯಾನ್ಸರ್ ಔಷಧಗಳ ದರ ಶೇ 70ರಷ್ಟು ಇಳಿಕೆ ನಿರೀಕ್ಷೆ

ಕ್ಯಾನ್ಸರ್ ಔಷಧಗಳ ದರ ಶೇ 70ರಷ್ಟು ಇಳಿಕೆ ನಿರೀಕ್ಷೆ

ನವದೆಹಲಿ, ಅ.8- ಮಾರಕ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಹಲವು ದುಬಾರಿ ಔಷಧಗಳ ಬೆಲೆ ಶೀಘ್ರದಲ್ಲೇ ಗಣನೀಯವಾಗಿ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ.


ಕ್ಯಾನ್ಸರ್‌ ಔಷಧಗಳ ಮೇಲಿನ ವ್ಯಾಪಾರ ಮಾರ್ಜಿನ್‌ಗೆ ಮಿತಿ ವಿಧಿಸಲು ಸರ್ಕಾರ ಮುಂದಾಗಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


, ಶೆಡ್ಯೂಲ್‌ನಲ್ಲಿ ಇಲ್ಲದ ಕ್ಯಾನ್ಸರ್‌ ಔಷಧಗಳ ವ್ಯಾಪಾರ ಮಾರ್ಜಿನ್ ಅ (ಎಂಆರ್ ಪಿ)ಯನ್ನು ಶೇ.30ಕ್ಕೆ ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿದೆ. ಹೀಗಾಗಿ ದುಬಾರಿ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ ನಿರೀಕ್ಷಿಸಲಾಗಿದೆ.


ಈ ಬೆಲೆ ನಿಯಂತ್ರಣ ಕ್ರಮವು ಬ್ರಾಂಡೆಡ್ ಮತ್ತು ಜೆನೆರಿಕ್ ಔಷಧಗಳು, ದೇಶೀಯ ಹಾಗೂ ಆಮದು ಮಾಡಿಕೊಳ್ಳುವ ಔಷಧಗಳು, ಪೇಟೆಂಟ್ ಹೊಂದಿರುವ ಮತ್ತು ಪೇಟೆಂಟ್ ಇಲ್ಲದ ಔಷಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಯಾನ್ಸರ್‌ ಔಷಧಗಳಿಗೆ ಅನ್ವಯಿಸುವ ಸಾಧ್ಯತೆಯಿದೆ.


ವಿಶೇಷವಾಗಿ ಪೇಟೆಂಟ್ ಹೊಂದಿರುವ ದುಬಾರಿ ಔಷಧಗಳ ಬೆಲೆಯಲ್ಲಿ ಈ ಕ್ರಮದ ಪರಿಣಾಮ ಹೆಚ್ಚು ಕಂಡುಬರಬಹುದು. ಕೆಲವು ಔಷಧಗಳ ಎಂ ಆರ್ ಪಿಯಲ್ಲಿ ಶೇ.70ರವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.


ರೋಗಿಗಳಿಗೆ ₹2,500 ಕೋಟಿ ಉಳಿತಾಯ
ಕ್ಯಾನ್ಸರ್‌ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳು ಮತ್ತು ಕುಟುಂಬಗಳ ಮೇಲೆ ಬೀಳುವ ಭಾರಿ ವೆಚ್ಚವನ್ನು ಕಡಿಮೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.


ಈ ಕ್ರಮದಿಂದ ರೋಗಿಗಳಿಗೆ ವರ್ಷಕ್ಕೆ ಸುಮಾರು ₹2,500 ಕೋಟಿ ಉಳಿತಾಯವಾಗಬಹುದು ಎಂದು ಸರ್ಕಾರ ಅಂದಾಜು ಮಾಡಿದೆ


ಔಷಧಗಳ ಮೇಲಿನ ಅತಿಯಾದ ವ್ಯಾಪಾರ ಮಾರ್ಜಿನ್‌ಗೆ ಕಡಿವಾಣ ಹಾಕುವುದರ ಜೊತೆಗೆ, ಜೀವ ಉಳಿಸುವ ಅಗತ್ಯ ಔಷಧಗಳು ಮಾರುಕಟ್ಟೆಯಲ್ಲಿ ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ .


ಕ್ಯಾನ್ಸರ್‌ ಚಿಕಿತ್ಸೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಔಷಧಗಳ ಬೆಲೆ ಇಳಿಕೆಯಾದರೆ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗಲಿದೆ.