
ಕಲಬುರಗಿ,ಅ.9: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪ್ರಾದೇಶಿಕ ಕಚೇರಿ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಗಾಂಧೀ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ಜರುಗಿತು.ಮಹಾದಾಸೋಹಿ ಶರಣಬಸವೇಶ್ವರ ಸನ್ನಿಧಾನದ ಶಿವಾನುಭವ ಮಂಟಪದಲ್ಲಿ ಸಮಾವೇಶ ಜರುಗಿತು. ನಗರದ ಜಗತ್ ಸರ್ಕಲ್ ನಿಂದ ಹೊರಟು ಗೋವಾ ಹೋಟೆಲ್ ಮಾರ್ಗವಾಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಜಾಥಾ ಜರುಗಿತು.
ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ
ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಿಲ್ಲಾಧಿಕಾರಿ
ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪಎಸ್.ಡಿ, ಬ್ಯಾಂಕ್‍ಆಫ್ ಬರೋಡಾ, ಪ್ರಾದೇಶಿಕ ಕಛೇರಿ
ಯ ಎಜಿಎಂ ಅಮಿತ್ ಶೆಟ್ಟಿ ,ಜಿಲ್ಲಾಜನಜಾಗೃತಿ ವೇದಿಕೆಅಧ್ಯಕ್ಷ ಸಿ.ಎನ್.ಬಾಬಳಗಾಂವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್‍ಯಡ್ರಾಮಿ, ಮತ್ತು ಜಿಲ್ಲಾಜನಜಾಗೃತಿವೇದಿಕೆಯ ಎಲ್ಲಾಪದಾಧಿಕಾರಿಗಳು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಧಿಕಾರಿಗಳಾದ ದಿನೇಶ್ ಪೂಜಾರಿ ಮತ್ತು ಗಣಪತಿ ಮಾಳಂಜಿ ,ಕಲಬುರ್ಗಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಪಾಲ್ಗೊಂಡರು.
ವ್ಯಸನಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬ ಸಂದೇಶವನ್ನು ಸಮಾವೇಶದ ಮೂಲಕ ನೀಡಲಾಯಿತು.























