Home ಜಿಲ್ಲೆ ಕಲಬುರಗಿ ಮಣ್ಣೂರಿನಲ್ಲಿ ಮಾಧವತೀರ್ಥರ ಆರಾಧನಾ ಮಹೋತ್ಸವ

ಮಣ್ಣೂರಿನಲ್ಲಿ ಮಾಧವತೀರ್ಥರ ಆರಾಧನಾ ಮಹೋತ್ಸವ

ಅಫಜಲಪುರ,ಅ.9-ತಾಲೂಕಿನ ಭೀಮಾ ತೀರದ ಪುಣ್ಯತಾಣ ಮಣ್ಣೂರಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಮಹಾಲಯ ಅಮಾವಾಸ್ಯೆ ಶನಿವಾರ ಮಾಧವತೀರ್ಥರ ಆರಾಧನೆ ಮಹೋತ್ಸವ ಜರುಗಲಿದೆ.
ಆರಾಧನೆಯ ದಿನ ಶನಿವಾರ ಬೆಳಿಗ್ಗೆ ಸುಪ್ರಭಾತ ವೇದೇಶತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ 11 ಗಂಟೆಗೆ ರಥೋತ್ಸವ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಗುರುಗಳಿಗೆ ಪಂಚಾಮೃತ ಅಭಿಷೇಕ ವಿದ್ವಾಂಸರಿಂದ ಪ್ರವಚನ ಹಸ್ತೋದಕ ತೀರ್ಥ ಪ್ರಸಾದ ಸಾಯಂಕಾಲ ಭಜನೆ ಪಲ್ಲಕ್ಕಿ ಉತ್ಸವ ವಿದ್ವಾಂಸರಿಂದ ಪ್ರವಚನ ಮಹಾ ಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಪಂಡಿತ ಅನಂತಾಚಾರ್ಯ ಅಕಮಂಚಿ ಪಂಡಿತ ಸರ್ವೇಷಾಚಾರ್ಯ ಅಕಮಂಚಿ ಹಾಗೂ ಶ್ರೀ ಮಾಧವತೀರ್ಥ ವೇದೇಶತೀರ್ಥ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.