
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೧೧: ಗದ್ದನಕೇರಿ ಕ್ರಾಸ್ ಲಡ್ಡು ಮುತ್ಯಾನ ಮಠದಲ್ಲಿ ಕಿತ್ತೂರು ಕರ್ನಾಟಕ ವಿಭಾಗದ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ ಅಧ್ಯಕ್ಷತೆಯಲ್ಲಿ ಕಿತ್ತೂರು ಕರ್ನಾಟಕ ವಿಭಾಗೀಯ ಪೂರ್ವಭಾವಿ ಸಭೆಯೂ ಹಮ್ಮಿಕೊಂಡ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಅಧ್ಯಕ್ಷ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಎನ್. ಡಿ. ವಸಂತಕುಮಾರ ಇವರುಗಳ ನೇತೃತ್ವದಲ್ಲಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ವಿಜಯಪುರ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಿ ಆದೇಶಿಸಿದರು.
ಸಿದ್ದನಗೌಡ ಜಲಪುರ (ಪಾಟೀಲ) ಜಿಲ್ಲಾಧ್ಯಕ್ಷರನ್ನಾಗಿ, ಮಹಾದೇವಪ್ಪ. ಶಿ. ತೇಲಿ ಕಾರ್ಯಧ್ಯಕ್ಷರನ್ನಾಗಿ, ಸಂಗಾರೆಡ್ಡಿ ತೆಗ್ಗಿನಮನಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ, ಗುರಣ್ಣಗೌಡ ಬಿರಾದಾರ ಜಿಲ್ಲಾ ಉಪಾಧ್ಯಕ್ಷರನ್ನಾಗಿ, ಸಾಹೇಬಗೌಡ ರೆಡ್ಡಿ, ಪುಟ್ಟು ಗಡದನ್ನವರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ, ಶಾಂತಾ ಕೆರೊಟಗಿ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ, ಶಂಕ್ರಮ್ಮ ಚಿನ್ನರೆಡ್ಡಿ ಮಲ್ಲಾಬಾದಿ ಜಿಲ್ಲಾ ಮಹಿಳಾ ಉಪಾಧ್ಯಕ್ಷರನ್ನಾಗಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದರು. ಸಿದ್ದನಗೌಡ ಪಾಟೀಲ್ ಅವರಿಗೆ ರಾಜ್ಯಾಧ್ಯಕ್ಷರು ರಾಜ್ಯ ಗೌರವ ಅಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ವಿಜಯಪುರ ಜಿಲ್ಲಾ ಅಧ್ಯಕ್ಷರೆಂದು ಘೋಷಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೆಆರ್‌ಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಂಜುಳ ಎಸ್.ಅಕ್ಕಿ ವಿಭಾಗಿಯ ಕಾರ್ಯದರ್ಶಿ ಎಂ.ಎಲ್. ಕೆ ನಾಯ್ಡು, ವಿಜಯನಗರದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ತಂಬ್ರಹಳ್ಳಿ, ಕಿತ್ತೂರು ಕರ್ನಾಟಕ ವಿಭಾಗದ ಪ್ರಮುಖರಾದ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ ಕುಮಾರ, ಚನ್ನಪ್ಪ ಗಣಾಚಾರಿ, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ್ ಮೊಕಾಶಿ, ಗದಗ ಜಿಲ್ಲಾಧ್ಯಕ್ಷ, ಮುತ್ತನಗೌಡ ಚೌಡರೆಡ್ಡಿ, ಯುವ ಘಟಕದ ರಾಜ್ಯ ಸಂಚಾಲಕ ಸಿದ್ದನಗೌಡ ಪಾಟೀಲ್, ಕಿತ್ತೂರು ಕರ್ನಾಟಕ ವಿಭಾಗದ ಕಾರ್ಯದರ್ಶಿ ಡಿ.ಎಮ್. ನಧಾಪ್ ಸೇರಿದಂತೆ ಕಿತ್ತೂರು ಕರ್ನಾಟಕದ ಬಾಗಲಕೋಟೆ ವಿಜಯಪುರ, ಬೆಳಗಾವಿ, ಗದಗ, ಸೇರಿದಂತೆ ಮುಂತಾದ ಪದಾಧಿಕಾರಿಗಳು ಇದ್ದರು.































