Home ಜಿಲ್ಲೆ ಶಿವಮೊಗ್ಗ ಪಾಳುಬಿದ್ದ ಪಾರ್ಕ್‌ನಲ್ಲಿ ನಾಗರಿಕರಿಂದ ಗಿಡ ನೆಡುವ ಜವಾಬ್ದಾರಿ

ಪಾಳುಬಿದ್ದ ಪಾರ್ಕ್‌ನಲ್ಲಿ ನಾಗರಿಕರಿಂದ ಗಿಡ ನೆಡುವ ಜವಾಬ್ದಾರಿ

ಶಿವಮೊಗ್ಗ, ಜು.೧೩-ಶಿವಮೊಗ್ಗ ನಗರದ ಹೊರವಲಯ ಮತ್ತೋಡು ಸಮೀಪದ ಫಾರ್ಚೂನ್ ಬಡಾವಣೆಯ ಉದ್ಯಾನವನದಲ್ಲಿ ಜುಲೈ ೧೨ ರಂದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಶ್ರೀವಿನಾಯಕ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಶ್ರೀ ವಿನಾಯಕ ಮಹಿಳಾ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಫಾರ್ಚೂನ್ ಹೋಂ ಲೇಔಟ್, ಧನಲಕ್ಷ್ಮೀ ಲೇಔಟ್, ಬೃಂದಾವನ ಲೇಔಟ್, ವಿಭು ಲೇಔಟ್, ಸಾಲ್ಡಾನಾ ಲೇಔಟ್, ಜೆ ಪಿ ಲೇಔಟ್, ವಿಜಯಲಕ್ಷ್ಮೀ ಬಡಾವಣೆ, ಶ್ರೀಧರ್ ಲೇಔಟ್ ನಿವಾಸಿಗಳು ಉದ್ಯಾನವನ ಸ್ವಚ್ಛಗೊಳಿಸಿ, ಸುಮಾರು ೨೦೦ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಹೆಚ್, ಸಿಮ್ಸ್ ಕಾಲೇಜ್ ನ ಚರ್ಮ ವಿಭಾಗದ ಹೆಚ್‌ಓಡಿ ಡಾ. ದಾದಾಪೀರ್ ಹೆಚ್ ಜೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ನ ಪ್ರೊಫೆಸರ್ ಡಾ. ಮಂಜುನಾಥ್ ಎಂ, ಚರ್ಮರೋಗ ತಜ್ಞರಾದ ಡಾ. ಆದಿನಾಥ್ ಭಂಡರಾಕರ್, ಪರಿಸರ ಪ್ರೇಮಿ ನವಶ್ರೀ ನಾಗೇಶ್ ಡಿ, ಪತ್ರಕರ್ತರಾದ ಬಿ ರೇಣುಕೇಶ್ ಅವರು ಭಾಗಿಯಾಗಿದ್ದರು.


ಉಳಿದಂತೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಿದ್ದೇಶ್ವರಪ್ಪ ವೈ ಎಂ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷ ಸತೀಶ್ ಕೆ ಎಲ್, ಕಾರ್ಯದರ್ಶಿ ಬಸವರಾಜಪ್ಪ ಜಿ ಪಿ, ಜಂಟಿ ಕಾರ್ಯದರ್ಶಿ ಸತೀಶ್ ಎ ಜಿ, ಖಜಾಂಚಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕಣ್ಣದಾಸ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷರಾದ ಗೀತಾ ರಂಗನಾಥ್, ಉಪಾಧ್ಯಕ್ಷೆ ಛಾಯಾ, ಕಾರ್ಯದರ್ಶಿ ಪುಷ್ಪ ಕುಮಾರ್, ಖಜಾಂಚಿ ಸೌಮ್ಯ ಬಸವರಾಜ್, ಸಂಘಟನಾ ಕಾರ್ಯದರ್ಶಿ ರಶ್ಮಿ ಎಂ, ಸಹ ಕಾರ್ಯದರ್ಶಿ ಮಧು ಅರುಣ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಉಪಸ್ಥಿತರಿದ್ದರು.