
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.02: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಶ್ರೀ ವ್ಯಾಸ ಪೂರ್ಣಿಮೆ ಆಚರಣೆ ಹಾಗೂ ಆನಂದ ಮಠ ಕೃತಿಯ ಅಧ್ಯಯನ ಮತ್ತು ಸಂವಾದ ಕಾರ್ಯಕ್ರಮ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದಲ್ಲಿ ಆನಂದ ಮಠ ಕಾದಂಬರಿ ಮಹತ್ವದ ಪಾತ್ರವಹಿಸಿದೆ ಭಾರತದ ರಾಷ್ಟ್ರೀಯತೆ ಏಕತೆ ಒಗ್ಗಟ್ಟಿನ ಮಂತ್ರವಾದ ವಂದೇ ಮಾತರಂ ಗೀತೆಯು ಈ ಕಾದಂಬರಿಯ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಸಮರ್ಪಣಾ ಮನೋಭಾವ ಬಲಿದಾನಗಳೇ ಪ್ರಮುಖವಾಗಿವೆ. ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ರಾಜ್ಯ ಮಹಿಳಾ ಪ್ರಮುಖರಾದ ಚಂದ್ರಿಕಾ ಚಂದ್ರಕಾಂತ್ ನುಡಿದರು. ಅವರು ಇಂದು ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ಬಳಿ ಇರುವ ನೆಕ್ಸ್ಟ್ ಜನರೇಶನ್ ಲರ್ನಿಂಗ್ ಸೆಂಟರ್ನಲ್ಲಿ ವ್ಯಾಸ ಪೌರ್ಣಿಮೆ ಆಚರಣೆ ಹಾಗೂ ಶ್ರೀ ಬಂಕಿಮ್ ಚಂದ್ರ ಚಟರ್ಜಿ ಅವರ ಆನಂದಮಠ ಅಧ್ಯಯನ ಮತ್ತು ಸಂವಾದದಲ್ಲಿ ಮಾತನಾಡಿದರು ಮುಂದುವರೆದು ವ್ಯಾಸ ಮಹರ್ಷಿ ಬರೆದ ಮಹಾಭಾರತ ಪೂಜ್ಯನೀಯವಾಗಿದೆ ಸಾಹಿತ್ಯ ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗವಾಗಿವೆ ಈ ದೃಷ್ಟಿಯಲ್ಲಿ ರಾಮಾಯಣವೂ ಹೊರತಾಗಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಅರುಣಾರೆಡ್ಡಿ ಮಾತನಾಡಿ ಮಕ್ಕಳಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳ ಅರಿವಾಗಬೇಕು ನನ್ನ ದೇಶ ನಮ್ಮ ಸಂಸ್ಕೃತಿ ವಿಷಯವಾಗಿ ವಿಚಾರಗೋಷ್ಠಿಗಳು ಚರ್ಚಾ ಸ್ಪರ್ಧೆಗಳು ಹೆಚ್ಚೆಚ್ಚು ನಡೆಯಬೇಕೆಂದರು ಅಧ್ಯಕ್ಷೀಯ ಭಾಷಣದಲ್ಲಿ ಲತಾ ಪಾಟೀಲ್ ಮಾತನಾಡಿ ಮಕ್ಕಳು ಮೊಬೈಲ್ ದಾಸರಾಗದೆ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಒಂದು ಉತ್ತಮವಾದ ಪುಸ್ತಕ ಹಲವಾರು ಶಿಕ್ಷಕರಿಗೆ ಸಮ ಎಂದರು ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರುಗಳಾದ ಚ.ಮ. ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು ಸ್ವಾಗತ ಮತ್ತು ಪ್ರಾಸ್ತವಿಕ ನಿರೂಪಣೆಯನ್ನು ಕಾರ್ಯದರ್ಶಿ ಯು ರಮೇಶ್ ವಂದನಾರ್ಪಣೆಯನ್ನು ಚಂದ್ರಕಾಂತ್ ನೆರವೇರಿಸಿದರು ವಂದೇ ಮಾತರಂ ಗೀತೆಯನ್ನು ಶಾರದಾ ವಿದ್ಯಾಪೀಠದ ಶಾಲೆಯ ಮಕ್ಕಳು ಹಾಡಿದರು






























