
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.02: ರಂಗತೋರಣ ಸಾಂಸ್ಕೃತಿಕ ಸಂಘಟನೆಯಿಂದ ನಗರದ ಪಾಂಚಜನ್ಯ ಸಭಾಂಗಣದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ “ರಂಗಚಾವಡಿ” ಕಾರ್ಯಕ್ರಮ ಆಯೋಜಿಸಿದೆ.
ಚಾವಡಿಯ ಯಜಮಾನರಾಗಿ ಮೈಸೂರಿನ ಖ್ಯಾತ ರಂಗಕರ್ಮಿ ಹುಲಗಪ್ಪ ಕಟ್ಟಿಮನಿ ಹಾಗೂ ತಮಿಳುನಾಡಿನ ಈರೋಡ್ನ ಅಂಬುರಾಜ್ ಭಾಗವಹಿಸಲಿದ್ದು, ಚಾವಡಿಯ ಕಾರಣಿಕರಾಗಿ ಸರಳಾದೇವಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಸ್ತಗೀರ್ ಸಾಬ್ ದಿನ್ನಿ ಅವರು ನಿರ್ವಹಿಸುವರು. ಕಾರ್ಯಕ್ರಮ ಶುರು ಮುನ್ನ ಹಿರಿಯರಂಗಕಲಾವಿದೆ ಆದವಾನಿ ವೀಣಾ ಅವರಿಂದ ಮಧುರ ರಂಗಗೀತೆಗಳ ಗಾಯನ ಕಾರ್ಯಕ್ರಮವಿದೆ. ಬಯಲಾಟ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಹಾರ್ಮೋನಿಯಂ ಹಾಗೂ ಕುರುಗೋಡಿನ ಎಂ.ವೀರೇಶ್
ಅವರು ತಬಲಾ ಸಾಥ್ ನೀಡುವರು ಎಂದು ರಂಗತೋರಣ ಸಂಸ್ಥೆಯ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಹಾಗೂ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು ತಿಳಿಸಿದ್ದಾರೆ.






























