
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.02: ಸೆಂಟ್ ಜೋಸೆಫ್ ಬಾಲಕಿಯರ ಕನ್ನಡ ಮೀಡಿಯಂ ಶಾಲೆ ಹಾಗೂ ಸೇಂಟ್ ಜೋಸೆಫ್ ಬಾಲಕರ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಹಾಗೂ ಆಕಲಚಲವಯ್ಯ ಬಡಾವಣೆಯಲ್ಲಿ ಈಶ್ವರ ಚಂದ್ರ ವಿದ್ಯಾ ಸಾಗರ್ ಅವರ 135ನೇ ವರ್ಷದ ಸ್ಮರಣೆ ದಿನವನ್ನು ಆಚರಿಸಲಾಯಿತು. ಇಂದು ಸಮೂಹ ಮಾಧ್ಯಮದಲ್ಲಿ ಸಾಕಷ್ಟು ಅಶ್ಲೀಲ, ನೀತಿ ನೈತಿಕತೆ ಇಲ್ಲದ, ಕ್ರೂರ ಘಟನೆಗಳಿಂದ ತುಂಬಿದ ಕಾರ್ಯಕ್ರಮಗಳು ವ್ಯಾಪಕವಾಗಿ ಪ್ರಚಾರ ನಡೆಯುತ್ತಿದೆ. ಇದರ ಪರಿಣಾಮವಾಗಿ ಇಡೀ ಸಮಾಜದಲ್ಲಿ ವಿದ್ಯಾರ್ಥಿ ಯುವಜನರ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತಿದೆ. ಆದ್ದರಿಂದ ಕೆಟ್ಟ ಘಟನೆಗಳು ಹೆಣ್ಣು ಮಕ್ಕಳ ಮೇಲೆ, ಇಡೀ ಸಮಾಜದಲ್ಲಿ ನಡೆಯುತ್ತಿದೆ. ಅಲ್ಲಿ ಒಳ್ಳೆ ವಿಚಾರಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಮಹಾನ್ ಮಾನವತಾವಾದಿ ಹಾಗೂ ನವೋದಯ ಹರಿಕಾರರಾದ ಈಶ್ವರ ಚಂದ್ರ ವಿದ್ಯಾ ಸಾಗರ್ ಸ್ಮರಣೆ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎ ಐ ಎಸ್ ಇ ಸಿ ಯ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಎಸ್ ಜಿ ಅವರು ಮಾತನಾಡುತ್ತಾ, ಈಶ್ವರ ಚಂದ್ರ ವಿದ್ಯಾಸಾಗರ್ ರವರು ಪಶ್ಚಿಮ ಬಂಗಾಳದ ಕಲ್ಕತ್ತೆಯ ಮಿಡ್ನ ಪುರ ಜಿಲ್ಲೆಯಲ್ಲಿ 1820 ರಲ್ಲಿ ಜನಿಸಿದರು ಇವರ ತಂದೆ ಥಾಕುರ್ ದಾಸ್ ಬಂದೋಪಾಧ್ಯಾಯ ಮತ್ತು ತಾಯಿ ಭಗವತಿ ದೇವಿ, ಇವರು ಬಾಲ್ಯದಲ್ಲಿ ಅತಿವ ಬಡತನದಲ್ಲಿದ್ದರೂ ಶಿಕ್ಷಣದಲ್ಲಿ ಸಾಕಷ್ಟು ಪಾಂಡಿತ್ಯವನ್ನು ಕಲಿತಿದ್ದರು. ನಂತರದ ದಿನಗಳಲ್ಲಿ ಸಾಹಿತ್ಯ, ಇತಿಹಾಸ,ವಿಜ್ಞಾನ ಗಣಿತ, ವೇದ ಉಪನಿಷತ್ ಇದರಲ್ಲಿ ಆಳವಾದ ಜ್ಞಾನವನ್ನು ಪಡೆದುಕೊಂಡರು. ಜ್ಞಾನವನ್ನು ಪಡೆದುಕೊಳ್ಳುವುದು ಪಂಡಿತರಾಗಲು ಅಲ್ಲ ಅದನ್ನು ಮಾನವನ ಕಲ್ಯಾಣಕ್ಕಾಗಿ ಉಪಯೋಗಿಸಬೇಕು. ಅವರು ತಾವು ಗಳಿಸಿದಂತ ಜ್ಞಾನವನ್ನು ಅಂಧಕಾರದಲ್ಲಿರುವ ಜನರನ್ನು ಜ್ಞಾನದ ಕಡೆಗೆ ತರಲು ಬಯಸಿದ್ದರು. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಮೂಢನಂಬಿಕೆಯನ್ನು ಸಮಾಜದಲ್ಲಿ ಹೋಗಲಾಡಿಸಬೇಕೆಂದು ಹೇಳಿದರು.
ಸಾಮಾಜಿಕ ಸಮಸ್ಯೆಗಳಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಮರು ವಿಧವ ವಿವಾಹ ನಡೆಯಬೇಕೆಂದು, ಅವರಿಗೆ ಅವಮಾನ, ಸಾಮಾಜಿಕ ಬಹಿಷ್ಕಾರಗಳಾದರು, ಹೋರಾಟವನ್ನು ಕೈ ಬಿಡದೇ ಮುಂದುವರಿಸಿ ಯಶಸ್ವಿಯಾದರು ಇದಕ್ಕೆ ಕಾರಣ ನೊಂದ ಜನತೆಯ, ಹೆಣ್ಣು ಮಕ್ಕಳ ಮೇಲೆ ಇದ್ದಂತ ಅಪಾರವಾದ ದಯೆ ಮತ್ತು ಕರುಣೆ, ಆದ್ದರಿಂದ ಇವರನ್ನು ದಯಾಸಾಗರ ಎಂದು ಜನರೇ ಕರೆದರು. ಇಂದು ವಿದ್ಯಾ ಸಾಗರ್ ರವರು ಗಳಿಸಿ ಕೊಟ್ಟಂತ, ಹೆಣ್ಣುಮಕ್ಕಳ ಶಿಕ್ಷಣ ಪಡೆಯುವ ಹಕ್ಕು ಗಾಗಿ ಅವರಿಗೆ ಕೃತಜ್ಞರಾಗಿರಬೇಕು. ನಾವು ಅವರ ಹೋರಾಟದ ಸ್ಫೂರ್ತಿ ಇಂದಿನ ಎಲ್ಲಾ ಸಮಸ್ಯೆಗಳನ್ನು ಹೊರಾ ಡಲು ಮಾದರಿಯಾಗಿ ಅನುಸರಿಸಬೇಕು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಜನತೆ ಭಾಗವಹಿಸಿದ್ದರು.






























