Home ಜಿಲ್ಲೆ ಶಿವಮೊಗ್ಗ ಮಳೆ ಕೊರತೆ : ಕೃಷಿ ಚಟುಟಿಕೆಗೆ ಹಿನ್ನಡೆ

ಮಳೆ ಕೊರತೆ : ಕೃಷಿ ಚಟುಟಿಕೆಗೆ ಹಿನ್ನಡೆ

oplus_0

ಶಿವಮೊಗ್ಗ, ಜು.೧೯-ಶಿವಮೊಗ್ಗ ತಾಲೂಕಿನಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟ ಮುಂದುವರಿದಿದೆ. ಜೂನ್ ತಿಂಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿತ್ತು. ಉಳಿದಂತೆ ಜುಲೈ ತಿಂಗಳ ಮೊದಲ ವಾರದ ಅಸುಪಾಸು ಉತ್ತಮ ಮಳೆಯಾಗಿತ್ತು. ನಂತರ ಬೇಸಿಗೆ ಬಿಸಿಲು ಬೀಳಲಾರಂಭಿಸಿತ್ತು.

ಇದೀಗ ಮತ್ತೆ ಮಳೆ ವಾತಾವರಣ ಕಂಡುಬರಲಾರಂಭಿಸಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ತಾಲೂಕಿನಲ್ಲಿ ಬರದ ಕಾರ್ಮೋಡ ತಲೆದೋರುವಂತಾಗಿದ್ದು, ಇದು ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.

ಈಗಾಗಲೇ ಶಿವಮೊಗ್ಗ ತಾಲೂಕಿನ ಹಲವೆಡೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಸದ್ಯ ಮಳೆಯ ತುರ್ತು ಅಗತ್ಯವಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ. ಮತ್ತೊಂದೆಡೆ, ಭತ್ತ ನಾಟಿ ಕಾರ್ಯಕ್ಕೆ ರೈತರು ಈಗಾಗಲೆ ಗದ್ದೆಯ ಹಸನು ಕಾರ್ಯವನ್ನು ರೈತರು ಮಾಡಿಕೊಂಡಿದ್ದಾರೆ.

ಆದರೆ ಮಳೆ ಕೊರತೆಯಿಂದ ನಾಟಿ ಕಾರ್ಯ ವಿಳಂಬವಾಗಿದೆ. ಒಟ್ಟಾರೆ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟವು ಅನ್ನಾದತರನ್ನು ಕಂಗಲಾಗುವಂತೆ ಮಾಡಿರುವುದಂತೂ ಸತ್ಯವಾಗಿದೆ.