Home ಜಿಲ್ಲೆ ಶಿವಮೊಗ್ಗ ಚರಂಡಿಯಲ್ಲಿ ಸಿಲುಕಿಬಿದ್ದ ಹಸು ರಕ್ಷಣೆ

ಚರಂಡಿಯಲ್ಲಿ ಸಿಲುಕಿಬಿದ್ದ ಹಸು ರಕ್ಷಣೆ

ಶಿವಮೊಗ್ಗ, ಜು.೧೩-ಶಿವಮೊಗ್ಗ ನಗರದ ಹೊರವಲಯ ಪಿ ಅಂಡ್ ಟಿ ಕಾಲೋನಿಯ ೨ ನೇ ತಿರುವಿನ ಮನೆಯೊಂದರ ಪಕ್ಕದ ಚರಂಡಿಯಲ್ಲಿ ಬಿದ್ದು ಮೇಲೇಳಲು ಆಗದೆ ಸಂಕಷ್ಟ ಪಡುತ್ತಿದ್ದ ಆಕಳೊಂದನ್ನು ಅಗ್ನಿಶಾಮಕ ದಳ ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ ಘಟನೆ ಜುಲೈ ೧೧ ರ ಸಂಜೆ ನಡೆದಿದೆ.


ಹುಲ್ಲು ಮೇಯುವ ವೇಳೆ ಆಕಸ್ಮಿಕವಾಗಿ ಚರಂಡಿಗೆ ಆಕಳು ಮಗುಚಿ ಬಿದ್ದಿದೆ. ಬೆನ್ನು ಕೆಳಗಾಗಿ ಕಾಲುಗಳು ಮೇಲಿದ್ದ ಕಾರಣದಿಂದ, ಚರಂಡಿಯಿಂದ ಮೇಲೆ ಬರಲು ಸಾಧ್ಯವಾಗದೆ, ಆಕಳು ಒದ್ದಾಡಲಾರಂಭಿಸಿತ್ತು.
ಈ ಕುರಿತಂತೆ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿಯುತ್ತಿzಚಿಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ? ಸಿಬ್ಬಂದಿಗಳು, ಗೋ ಸಂರಕ್ಷಣಾ ತಂಡದ ನೆರವಿನೊಂದಿಗೆ ಆಕಳ ದೇಹಕ್ಕೆ ಬೆಲ್ಟ್ ಕಟ್ಟಿ ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಸಫಲರಾಗಿದ್ದಾರೆ.


ಸದರಿ ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಐಎಫ್‌ಎಸ್ಟಿಓ ಮಕ್ತ್ದುಂ ಹುಸೇನ್, ಎಲ್ ಎಫ್ ಸುನೀಲ್, ಎಫ್ ಡಿ ಸಂಗಮೇಶ್, ಎಫ್‌ಎಂ ಮನೋಜ್, ಅಭಿಷೇಕ್ ಭಾಗಿಯಾಗಿದ್ದರು.