Home ಜಿಲ್ಲೆ ಔಷಧಗಳ ಗುಣಮಟ್ಟ: ಜಾಗರೂಕತೆ ವಹಿಸಿ

ಔಷಧಗಳ ಗುಣಮಟ್ಟ: ಜಾಗರೂಕತೆ ವಹಿಸಿ

ಬೀದರ್: ರೋಗಿಗಳಿಗೆ ಔಷಧ ನೀಡುವಾಗ ಔಷಧ ತಜ್ಞರು ಔಷಧಗಳ ಗುಣಮಟ್ಟದ ಕುರಿತು ಜಾಗರೂಕತೆ ವಹಿಸಬೇಕು ಎಂದು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಧನಂಜಯ್ ಹತ್‌ಪಾಕಿ ಸಲಹೆ ಮಾಡಿದರು.
ಆಹಾರ ಸರ‍್ಷಕತೆ ಮತ್ತು ಔಷಧ ಮಂಡಳಿ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ನಗರದ ಜನವಾಡ ರಸ್ತೆಯಲ್ಲಿನ ಬಸವೇಶ್ವರ ಲೇಔಟ್‌ನಲ್ಲಿ ಇರುವ ಫಾರ್ಮಾ ಭವನದಲ್ಲಿ ಬುಧವಾರ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಯೇ ಔಷಧ ತಜ್ಞರ ಪ್ರಥಮ ಆದ್ಯತೆಯಾಗಬೇಕು ಎಂದರು.
ವೈದ್ಯರ ಚೀಟಿ ಇಲ್ಲದೆ ರೋಗಿಗಳಿಗೆ ಔಷಧಗಳನ್ನು ಕೊಡಬಾರದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಮಾತನಾಡಿ, ಔಷಧ ತಜ್ಞರ ಪಾತ್ರವೂ ವೈದ್ಯರಷ್ಟೇ ಪ್ರಮುಖವಾಗಿದೆ. ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧ ಬರೆದುಕೊಟ್ಟರೆ, ಅದನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವ ಕುರಿತು ಮಾರ್ಗದರ್ಶನ ನೀಡುವವರು ಔಷಧ ತಜ್ಞರು ಎಂದು ತಿಳಿಸಿದರು.
ಸಂಘವು ಜಿಲ್ಲೆಯ ಔಷಧ ವ್ಯಾಪಾರಿಗಳ ಹಿತ ರಕ್ಷಣೆಗೆ ಸದಾ ಸಿದ್ಧವಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ಔಷಧ ತಜ್ಞರ ಮಾನ್ಯತೆ ನವೀಕರಣ ಅವಧಿಯನ್ನು ಒಂದು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಮಂಡಳಿ ವತಿಯಿಂದ ಹುಮನಾಬಾದ್‌ನ ಡೆಕ್ಕನ್ ಮೆಡಿಕಲ್‌ನ ಮಹಮ್ಮದ್ ಇಲಿಯಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ವರ್ಷ ಬೀದರ್‌ನ ಮೋದಿ ಮೆಡಿಕಲ್‌ನ ಶಶಿಕಾಂತ ಮೋದಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ೨೦ ಔಷಧ ತಜ್ಞರಿಗೆ ಉತ್ತಮ ಔಷಧ ತಜ್ಞ ಪ್ರಶಸ್ತಿ ನೀಡಲಾಯಿತು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎಂ.ಡಿ. ಖಾಲೀದ್ ಷರೀಫ್, ಕಾರ್ಯದರ್ಶಿ ರಾಜೇಂದ್ರ ನಮೋಶಿ, ಸಹ ಕಾರ್ಯದರ್ಶಿ ಅಬ್ದುಲ್ ಖದೀರ್, ಸಂಘಟನಾ ಕಾರ್ಯದರ್ಶಿ ಶಿವರಾಜ ರಾಗಾ, ಖಜಾಂಚಿ ಸಿದ್ರಾಮಪ್ಪ ಆನಂದೆ, ದೂರು ವಿಭಾಗದ ಅಧ್ಯಕ್ಷ ಎಹತೆಶಾಮ್ ಉಲ್ ಹಕ್, ಸದಸ್ಯರಾದ ಮಾದಪ್ಪ ಶಿರಶೆಟ್ಟಿ, ಸಾಯಿಬಣ್ಣ, ಸುರೇಶ್ ಬಿರಾದಾರ, ಬಸವರಾಜ ಮಡಕಿ, ಎಂ.ಡಿ. ಶಮಿ, ಮಲ್ಲಿಕಾರ್ಜುನ, ನವನಾಥ ಬಿರಾದಾರ, ಸಂತೋಷ್ ಸ್ವಾಮಿ, ಕಿರಣ್, ಬಸವರಾಜ ವೈರಾಗೆ, ದತ್ತಾತ್ರೇಯ ಕದಂ, ಮಾಣಿಕ ಕರಂಜಿ ಮತ್ತಿತರರು ಇದ್ದರು.