
ಕಲಬುರಗಿ: ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಇತರ ಡಿಜಿಟಲ್ ಮಧ್ಯವರ್ತಿಗಳು ಅಪ್ರಾಪ್ತ ವಯಸ್ಕರಿಗೆ ಸಂಬAಧಿಸಿದ ಭಾರತೀಯ ಕಾನೂನುಗಳನ್ನು ಪಾಲಿಸುವಂತೆ ಕಾನೂನುಬದ್ಧ ಚೌಕಟ್ಟು ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಕಲಬುರಗಿ, ಯಾದಗೀರ್, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದರ್ಶಿ ಸಂಸ್ಥೆ ಸ್ವಾಗತಿಸಿದೆ.
ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಲೈಂಗಿಕ ಶೋಷಣೆ, ಗ್ರೂಮಿಂಗ್, ಮಾನವ ಕಳ್ಳಸಾಗಣೆ, ಸೆಕ್ಸ್ಟಾರ್ಷನ್ ಹಾಗೂ ಸೈಬರ್‌ಬುಲ್ಲಿಂಗ್‌ನAತಹ ಅಪಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನ ಮಹತ್ವದ್ದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಮಾರ್ಗದರ್ಶಿ ಸಂಸ್ಥೆಯು ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (ಎಖಅ) ಸಂಸ್ಥೆಯ ಪಾಲುದಾರವಾಗಿದ್ದು, ಡಿಜಿಟಲ್ ವೇದಿಕೆಗಳನ್ನು ಬಳಸುವ ಮಕ್ಕಳಿಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಗೆ ಬೆಂಬಲ ನೀಡಿದೆ.
ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್ ಮಾತನಾಡಿ, ಭಾರತೀಯ ಕಾನೂನಿನ ಅಡಿಯಲ್ಲಿ ಡಿಜಿಟಲ್ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನ ಮಹತ್ವದ ಹೆಜ್ಜೆಯಾಗಿದೆ ಎಂದರು.
ಮಕ್ಕಳು ತಮ್ಮ ಜೀವನದ ಬಹುಪಾಲು ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದರೂ, ಅದರಿಂದ ಎದುರಾಗಬಹುದಾದ ಅಪಾಯಗಳ ಸಂಪೂರ್ಣ ಅರಿವು ಎಲ್ಲ ಸಂದರ್ಭಗಳಲ್ಲೂ ಇರುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಅತಿಯಾದ ಹಾಗೂ ಮೇಲ್ವಿಚಾರಣೆಯಿಲ್ಲದ ಬಳಕೆಯಿಂದ ಗ್ರೂಮಿಂಗ್, ಲೈಂಗಿಕ ದೌರ್ಜನ್ಯ ಮತ್ತು ಇತರ ರೀತಿಯ ಶೋಷಣೆಗೆ ಮಕ್ಕಳು ಒಳಗಾಗುವ ಸಾಧ್ಯತೆಯಿದೆ. ಈ ಅಪಾಯಗಳು ಆನ್‌ಲೈನ್‌ಗಷ್ಟೇ ಸೀಮಿತವಾಗದೆ, ಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರಭಾವಿತಗೊಳಿಸಿ ಅಥವಾ ಮೋಸಗೊಳಿಸಿ ಲೈಂಗಿಕ ಶೋಷಣೆ ಹಾಗೂ ಮಾನವ ಕಳ್ಳಸಾಗಣೆಯಂತಹ ಪರಿಸ್ಥಿತಿಗಳಿಗೆ ತಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಡಿಜಿಟಲ್ ವೇದಿಕೆಗಳಲ್ಲಿ ಬಲವಾದ ಸುರಕ್ಷತಾ ಕ್ರಮಗಳು ಹಾಗೂ ಹೊಣೆಗಾರಿಕೆ ತುರ್ತಾಗಿ ಅಗತ್ಯವಿದೆ ಎಂದು ಅವರು ಹೇಳಿದರು.
ಅಪ್ರಾಪ್ತ ವಯಸ್ಕರು ಡಿಜಿಟಲ್ ವೇದಿಕೆಗಳಲ್ಲಿ ಸ್ವತಂತ್ರವಾಗಿ ಖಾತೆಗಳನ್ನು ತೆರೆಯಲು ಹಾಗೂ ನಿರ್ವಹಿಸಲು ಅವಕಾಶ ನೀಡುತ್ತಿರುವ ಕುರಿತು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿತ್ತು. ಭಾರತೀಯ ಕಾನೂನಿನ ಪ್ರಕಾರ ಇಂತಹ ಒಪ್ಪಂದಗಳಿಗೆ ಸಂಬAಧಿಸಿದ ವಯೋಮಿತಿಯ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ದೇಶದಾದ್ಯಂತ ೭೮೨ ಜಿಲ್ಲೆಗಳಲ್ಲಿ ಸಮುದಾಯಗಳು, ಸರ್ಕಾರಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳೊAದಿಗೆ ಕಾರ್ಯನಿರ್ವಹಿಸುವ ಎನ್‌ಜಿಒಗಳ ದೊಡ್ಡ ಜಾಲವನ್ನು ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಹೊಂದಿದ್ದು, ಡಿಜಿಟಲ್ ಕ್ಷೇತ್ರ ಸೇರಿದಂತೆ ಮಕ್ಕಳಿಗೆ ಎದುರಾಗುವ ವಿವಿಧ ಅಪಾಯಗಳನ್ನು ಗುರುತಿಸಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.























