
ನಗರದ ಗುಂಜೂರು ಗ್ರಾಮಕ್ಕೆ ಬೆಂಗಳೂರು ಅಭಿವೃದ್ದಿ ಸಚಿವರಾದ ಕೃಷ್ಣಬೈರೆಗೌಡರು ಮತ್ತು ಹೆಚ್. ನಾಗೇಶ್‌ರವರು ಮಾಜಿ ಸಚಿವರು ಆಗಮಿಸಿ ಗುಂಜೂರು, ವರ್ತೂರ್, ಮುಖ್ಯರಸ್ತೆ ಹಾಗೂ ೧೫೦ ಅಡಿ ಸಿಡಿಪಿ ರಸ್ತೆ ಕಾಮಗಾರಿ ವೀಕ್ಷಿಸಿ ತಕ್ಷಣ ಕೆಲಸ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವಂತೆ ಸೂಚಿಸಿದರು. ಗುಂಜೂರು, ಗುಂಜೂರುಪಾಳ್ಯ, ದೊಡ್ಡಕನ್ನೆಲ್ಲಿ, ವರ್ತೂರ್, ಗ್ರಾಮಗಳ ಮುಖಂಡರುಗಳು ರಸ್ತೆ ಸಮಸ್ಯೆ ವಿಚಾರವನ್ನು ಸಚಿವರಲ್ಲಿ ತಿಳಿಸಿ ಬೇಗ ಮುಗಿಸಲು ಮನವಿ ಮಾಡಿದರು.























