Home ಜಿಲ್ಲೆ ಡಾ. ಪುರುಷೋತ್ತಮ ಬಿಳಿಮಲೆ ಬೀದರ್ ಗೆ

ಡಾ. ಪುರುಷೋತ್ತಮ ಬಿಳಿಮಲೆ ಬೀದರ್ ಗೆ

ಬೀದರ, ಅ ೦೧ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಇದೇ ಅಕ್ಟೋಬರ್ ೩ ರಂದು ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೮.೧೦ ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ವಿಭಾಗೀಯ ವಾಹನದ (ಡಿ.ವಿ) ಮೂಲಕ ಹುಮನಾಬಾದ್ ಮಾರ್ಗವಾಗಿ ಬಸವಕಲ್ಯಾಣ ತಲುಪಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ ೧೦ ಗಂಟೆಗೆ ಬಸವಕಲ್ಯಾಣದ ‘ಅನುಭವ ಮಂಟಪ’ ವಚನ ಭವನದಲ್ಲಿ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಸಂಪಾದಕತ್ವದ ‘ಶಿವಾನುಭವ’ ಪತ್ರಿಕೆಯ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ “ಶಿವಾನುಭವ ಪತ್ರಿಕೆ, ಕನ್ನಡದ ಅಸ್ಮಿತೆ” ಕುರಿತ ವಿಚಾರಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ತದನಂತರ ಸಂಜೆ ೪.೩೦ ಕ್ಕೆ ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.