
ಕಲಬುರಗಿ,ನ.25: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಯಶಸ್ವಿಯಾಗಿ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭೂ-ವಿಜ್ಞಾನ ನಿಕಾಯದ ಭೂವಿಜ್ಞಾನ ವಿಭಾಗ ಮತ್ತು ಮಾನವಿಕ ಮತ್ತು ಭಾಷಾ ನಿಕಾಯದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿ ಘೋಷಿಸಿದೆ.
ಮೃಗಂಕಾ ಡೊಲುಯಿ ಅವರು, ಭೂ-ವಿಜ್ಞಾನ ನಿಕಾಯದ, ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಲೈವಲಿಹೂಡ್ ಡೈವರ್ಸಿಟಿ, ಮೈಗ್ರೇಶನ್,” ಅಂಡ್ ಫುಡ್ ಸೆಕ್ಯೂರಿಟಿ: ಆ ಸ್ಟಡಿ ಅಮೊಂಗ್ ಟ್ರೈಬಲ್ ಹೌಸ್ಹೋಲ್ಡ್ಸ್ ಇನ್ ವೆಸ್ಟ್ ಬೆಂಗಾಳ” ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ಭೂವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜಿತ್ ಸರ್ಕಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ಮಾಧುರಿ ಅವರು, ಭೂ-ವಿಜ್ಞಾನ ನಿಕಾಯದ, ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಇನ್ ಇಕ್ವಾಲಿಟಿ ಇನ್ ದಿ ಆಕ್ಸೆಸ್ ಟು ಮಟರ್ನಲ್ ಅಂಡ್ ಚೈಲ್ಡ್ ಹೆಲ್ತ್ ಕೇರ್ ಸರ್ವಿಸ್ ಯುಟಿಲೈಜೆಷನ್ ಅಂಡ್ ನ್ಯೂಟ್ರಿಷನಲ್ ವೆಲ್-ಬೀಯಿಂಗ್ ಅಮೊಂಗ್ ದಿ ಚಿಲ್ಡ್ರನ್ ಇನ್ ಕರ್ನಾಟಕ ” ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಭೂವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜಿತ್ ಸರ್ಕಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ಚಿಪ್ಪಿ ಪುಷ್ಪಂಗಥನ್ ಅವರು ಭೂ-ವಿಜ್ಞಾನ ನಿಕಾಯದ, ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಪೆÇಟೆನಷಿಯಲ್ ಆಫ್ ಪ್ರಿಸಿಶನ್ ಅಗ್ರಿಕಲ್ಚರ್ ಯುಸಿಂಗ್ ಜಿಯೋಸ್ಪೆಷಿಯಲ್ ಇನ್ರ್ಫಾಮೇಷನ್ ಇನ್ ಖಾರಿಫ್ ಕಲ್ಟಿವೇಷನ್ ಇನ್ ಕಲಬುರಗಿ, ಕರ್ನಾಟಕ, ಇಂಡಿಯಾ” ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ಭೂ-ವಿಜ್ಞಾನ ವಿಭಾಗದÀ ಪ್ರಾಧ್ಯಾಪಕರುಗಳಾದ ಪ್ರೊ.ಅಲಿ ರಾಜಾ ಮೋಸ್ವಿ, ಹಾಗೂ ಸಹ ಮಾರ್ಗದರ್ಶಕ ಪ್ರೊ.ಮಹಮ್ಮದ್ ಅಸ್ಲಾಂ ಎಂ.ಎ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ವಿಜಯಲಕ್ಷ್ಮೀ ಅವರು ಮಾನವಿಕ ಮತ್ತು ಭಾಷಾ ನಿಕಾಯದ, ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆಯ ದಲಿತತ್ವದ ನೆಲೆಗಳು (ಹೊನ್ನ ಕೋಗಿಲೆಯ ಆರು ಸಂಪುಟಗಳನ್ನು ಅನುಲಕ್ಷಿಸಿ) ಎಂಬ ವಿಷಯದ ಕನ್ನಡ ವಿಭಾಗದÀ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ವಿ.ವಿ.ಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಪಿ.ಹೆಚ್.ಡಿ ಪದವಿ ಪಡೆದ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಅವರ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.



















