
ಬೆಂಗಳೂರು, ಜು. ೨೫- ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ತಡೆ ಹಾಕಲು ಒಂದು ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಅಕ್ಕಿ ಕಾಳಸಂತೆ ಮಾರಾಟ ತಡೆಗೆ ಒಂದು ಹೊಸ ಕಾಯ್ದೆ ಜಾರಿಗೆ ತರುವಂತೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದರು
ಅನ್ನಭಾಗ್ಯ ಅಕ್ಕಿ ಕಾಳಸಂತೆ ಮಾರಾಟ ದಂಧೆಯಲ್ಲಿ ಬಿಜೆಪಿ ನಾಯಕರೇ ಭಾಗಿಯಾಗಿರುವುದರ ಬಗ್ಗೆ ತಮ್ಮ ದಾಖಲೆಗಳಿವೆ ಎಂದರು.
ನಮ್ಮ ಭಾಗದಲ್ಲಿ ಹೆಚ್ಚಾಗಿ ಬಿಜೆಪಿ ನಾಯಕರೇ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಯಾರು ಅಕ್ಕಿ ಕಳ್ಳತನ ಮಾಡುತ್ತಾರೋ ಅವರಿಗೆ ಬಿಜೆಪಿ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.
ಅನ್ನಭಾಗ್ಯ ಅಕ್ಕಿ ಫ್ರಾನ್ಸ್, ಯುಎಐ, ಕತಾರ್‌ಗೆಲ್ಲಾ ಹೋಗುತ್ತಿದೆ. ಇದು ಬಿಜೆಪಿ ನಾಯಕರೇ ಮಾಡುತ್ತಿರುವ ಅಕ್ರಮ. ಇದು ಆರೋಪವಲ್ಲ. ಆರೋಪ ಸಾಬೀತಾಗಿದೆ. ಆರೋಪ ಪಟ್ಟಿಯನ್ನು ಸಲ್ಲಿಸಿದ್ದೇವೆ. ನಾನು ದಾಖಲೆ ಇಲ್ಲದೆ ಮಾತನಾಡಲ್ಲ ಎಂದರು.
ಅನ್ನಭಾಗ್ಯ ಅಕ್ಕಿ ಕಾಳಸಂತೆ ಮಾರಾಟಕ್ಕೆ ಕ್ರಮ ಕೈಗೊಳ್ಳುತ್ತೇನೆ. ಈಗ ತಾನೆ ನಾನು ಗೃಹ ಸಚಿವನಾಗಿ ನಾಲ್ಕು ವಾರ ಆಗಿದೆ. ಇನ್ನೊಂದು ತಿಂಗಳು ಬೇಕಾಗಿಲ್ಲ ನಿಮಗೆ ಸಧ್ಯದಲ್ಲೇ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಮಾಧ್ಯಮದರಿಗೆ ಅಚ್ಚರಿ ಹೇಳಿಕೆ ನೀಡಿದರು.
ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆ, ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆ ಅದನ್ನು ಬಿಟ್ಟು ಪ್ರಧಾನಿ ಮೋದಿ ಎಲ್ಲವನ್ನು ಮಾತನಾಡುತ್ತಿದ್ದಾರೆ ಎಂದರು.
ರಾಜೀನಾಮೆ ಪಡೆಯಲು ಮೋದಿಗೆ ಹೆದರಿಕೆ ಏಕೆ
ಪ್ರಧಾನಿ ಮೋದಿ ಅವರು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಯಾಕೆ ಹೆದರಿಕೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್ ಏನಾದರೂ ನಿರ್ದೇಶನ ಬಂದಿದೇಯೋ ಈತ ನಮ್ಮ ಕಾರ್ಯಕರ್ತ ರಕ್ಷಣೆ ಕೊಡಿ ಎಂದು ಹೇಳಿಬಹುದು ಅದಕ್ಕೆ ರಾಜೀನಾಮೆ ಪಡೆದಿಲ್ಲ ಎಂದು ಲೇವಡಿ ಮಾಡಿದರು.
ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಿರಿ. ನಾನು ನಿಮಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದರು.
ವಿಕಸಿತ ಭಾರತ ಮಡಬೇಕು ಎಂದರೇ ನೀವು ಯುವಕರಿಂದ ದೂರ ಇರುವ ಹಾಗಿಲ್ಲ. ಒಬ್ಬ ಪ್ರಧಾನಿಯಾಗಿ ಸಂಸತ್‌ನಲ್ಲಿ ಮಾತನಾಡಬೇಕು. ಅದು ಬಿಟ್ಟು ಎಲ್ಲೆಂದರಲ್ಲಿ ಮಾತನಾಡುವುದು ಪ್ರಧಾನಿಗಳಿಗೆ ಸರಿ ಹೋಗಲ್ಲ ಎಂದರು.
ಪ್ರಧಾನಿ ಮೋದಿ ಅವರು ಕೇಂದ್ರ ಸಚಿವರುಗಳಿಗೆ ರೀಲ್ಸ್ ಮಾಡಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀವು ಬಿಜೆಪಿ- ಜೆಡಿಎಸ್ ಕಾರ್ಯಕರ್ತರಿಗೆ ರೀಲ್ಸ್ ಮಾಡಿ ಹಾಕಿ. ನನಗೆ ದಿನವೂ ಅವರು ಟ್ರೋಲ್ ಮಿನಿಸ್ಟರ್ ಎಂದು ಹೇಳುತ್ತಾರೆ. ಆದರೆ ಪ್ರಧಾನಿಯವರೇ ಟ್ರೋಲ್ ಮಾಡುತ್ತಿದ್ದಾರೆ. ೧೨ ವರ್ಷಗಳಲ್ಲಿ ಇವರ ಸಾಧನೆ ಶೂನ್ಯ. ೧೨ ವರ್ಷಗಳಲ್ಲಿ ವಿವಿಧ ಪರೀಕ್ಷೆಗಳ ೫೨ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಅದರ ಬಗ್ಗೆ ದಯವಿಟ್ಟು ರೀಲ್ಸ್ ಮಾಡಿ ಎಂದು ವ್ಯಂಗ್ಯವಾಗಿ ಹೇಳಿದರು
ಮೆಡ್ ಇನ್ ಇಂಡಿಯಾ, ಮೆಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಇವೆಲ್ಲವೂ ವಿಫಲವಾಗಿವೆ. ಇದರ ಬಗ್ಗೆಯೂ ರೀಲ್ಸ್ ಮಾಡಿ ಎಂದು ಪ್ರಿಯಾಂಕ ಖರ್ಗೆ ಮೋದಿ ಅವರನ್ನು ಒತ್ತಾಯಿಸಿದರು.
ಯಾವುದೇ ಕ್ಷಣದಲ್ಲಾದರೂ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಹೇಳಿದರೆ ಮುಗಿಯಿತು. ಸಿಎಂ, ಮಾಜಿ ಸಿಎಂ, ಡಿಸಿಎಂ ಜತೆ ವರಿಷ್ಠರು ಮಾತನಾಡಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಆಗಬಹುದು ಎಂದರು.
ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡುವ ವಿಚಾರ ನನಗೆ ಗೊತ್ತಿಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ನೀಟ್ ಅಕ್ರಮದ ಬಗ್ಗೆ ಪ್ರತಿಭಟನೆ ಆಗುತ್ತಿದೆ. ನಾವು ದಬ್ಬಾಳಿಕೆ, ದೌರ್ಜನ್ಯ ಏನೂ ಮಾಡುತ್ತಿಲ್ಲ. ಪ್ರತಿಭಟನಾಕರರಿಗೆ ಸಹಕಾರ ಕೊಟ್ಟಿದ್ದೇವೆ. ಗೃಹ ಇಲಾಖೆಯನ್ನು ಹೇಗೆ ನಡೆಸಬೇಕು ಎಂಬುದುನ್ನು ಕರ್ನಾಟಕವನ್ನು ನೋಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಲಿಯಬೇಕು ಎಂದು ಪ್ರಿಯಾಂಕ ಖರ್ಗೆ ಹೇಳಿದರು.































