Home ಜಿಲ್ಲೆ ತುಮಕೂರು ಎಸ್‌ಐಆರ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಶಾಸಕ ಜ್ಯೋತಿಗಣೇಶ್ ಮನವಿ

ಎಸ್‌ಐಆರ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಶಾಸಕ ಜ್ಯೋತಿಗಣೇಶ್ ಮನವಿ

ತುಮಕೂರು, ಜು. ೨೮- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನವು ಪ್ರತಿಯೊಬ್ಬ ಮತದಾರರ ಹಕ್ಕು ಮತ್ತು ಪ್ರಜಾಪ್ರಭುತ್ವದ ಭದ್ರತೆಗೆ ಸಂಬಂಧಿಸಿದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ.


ತುಮಕೂರು ನಗರದಲ್ಲಿ ಈ ಅಭಿಯಾನಕ್ಕೆ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದು, ಇದುವರೆಗೆ ೧,೭೫,೦೦೦ಕ್ಕೂ ಅಧಿಕ ಮತದಾರರ ವಿವರಗಳ ಡಿಜಿಟಲೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಕ್ಕಾಗಿ ಕ್ಷೇತ್ರದ ಎಲ್ಲಾ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.


ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ Enumeration Formಗಳನ್ನು ಮತದಾರರು ಹಿಂತಿರುಗಿಸಬೇಕಿದೆ. ಆದ್ದರಿಂದ ಆಗಸ್ಟ್ ೮ ಕೊನೆಯ ದಿನಾಂಕವಿದೆ ಎಂದು ನಿರ್ಲಕ್ಷ್ಯ ಮಾಡದೆ, ಸಾಧ್ಯವಾದಷ್ಟು ಆಗಸ್ಟ್ ೧ ರೊಳಗೆ ಭರ್ತಿ ಮಾಡಿದ ಫಾರಂಗಳನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.


ಇದು ಭಾರತ ಚುನಾವಣಾ ಆಯೋಗದಿಂದಲೇ ನೇರವಾಗಿ ನಡೆಸಲಾಗುತ್ತಿರುವ ಅಧಿಕೃತ ಪ್ರಕ್ರಿಯೆ ಎಂಬುದನ್ನು ಪ್ರತಿಯೊಬ್ಬ ಮತದಾರರು ಮನಗಾಣಬೇಕು. ಆದ್ದರಿಂದ ಯಾವುದೇ ಗೊಂದಲ, ವದಂತಿ ಅಥವಾ ನಿರಾಸಕ್ತಿಗೆ ಅವಕಾಶ ನೀಡದೆ, ಚುನಾವಣಾ ಆಯೋಗದ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕೋರಿದ್ದಾರೆ.


ಈ ಅವಕಾಶವನ್ನು ಕೈಚೆಲ್ಲಬೇಡಿ. ಈಗ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ, ಮುಂದಿನ ದಿನಗಳಲ್ಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ತಿದ್ದುಪಡಿ, ಸೇರ್ಪಡೆ ಅಥವಾ ಇತರ ಪ್ರಕ್ರಿಯೆಗಳಿಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು, ಅಗತ್ಯ ದಾಖಲೆಗಳನ್ನು ಒದಗಿಸುವುದು, ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಭೇಟಿ ನೀಡುವುದು ಸೇರಿದಂತೆ ನಿಮ್ಮ ಅಮೂಲ್ಯವಾದ ಸಮಯ ಮತ್ತು ಹಣ ವ್ಯಯವಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂದೆ ಅನಗತ್ಯ ತೊಂದರೆ ಅನುಭವಿಸುವ ಬದಲು, ಈಗಲೇ ಮುತುವರ್ಜಿಯಿಂದ ನಿಮ್ಮ ಇಟಿumeಡಿಚಿಣioಟಿ ಈoಡಿm ಅನ್ನು ಭರ್ತಿ ಮಾಡಿ ಸಲ್ಲಿಸಿ.


ಕಳೆದ ಸುಮಾರು ೨೦ ದಿನಗಳಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಮಾಹಿತಿ ಅಥವಾ ಸಹಾಯ ಬೇಕಾದಲ್ಲಿ ಅದರ ಸೇವೆಯನ್ನು ಈಗಲೂ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.


ಮತದಾರರ ಗುರುತಿನ ಚೀಟಿ ಕೇವಲ ಮತ ಚಲಾಯಿಸಲು ಮಾತ್ರ ಇರುವ ದಾಖಲಾತಿಯಲ್ಲ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಅತ್ಯಂತ ಮಹತ್ವದ ಗುರುತಿನ ದಾಖಲಾತಿಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಸೇವೆಗಳು, ಯೋಜನೆಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಇದರ ಮಹತ್ವ ಇನ್ನ? ಹೆಚ್ಚಾಗುವ ಸಾಧ್ಯತೆಯಿರುವುದರಿಂದ, ಈ ಪ್ರಕ್ರಿಯೆಯ ಬಗ್ಗೆ ಯಾವುದೇ ತಾತ್ಸಾರ ಅಥವಾ ನಿರಾಸಕ್ತಿ ತೋರದೆ ನಿಮ್ಮ ಹೆಸರು ಹಾಗೂ ವಿವರಗಳನ್ನು ಸರಿಯಾಗಿ ದಾಖಲಿಸಿಕೊಳ್ಳಿ ಎಂದಿದ್ದಾರೆ.


ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಈ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬ ಮತದಾರರು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿ, ಮತಗಟ್ಟೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.