Home ಜಿಲ್ಲೆ ತುಮಕೂರು ರೋಗಿಗಳ ಆರೋಗ್ಯ ಸುರಕ್ಷತೆಗೆ ವೈದ್ಯರ ಜ್ಞಾನ ವೃದ್ಧಿ ಅಗತ್ಯ

ರೋಗಿಗಳ ಆರೋಗ್ಯ ಸುರಕ್ಷತೆಗೆ ವೈದ್ಯರ ಜ್ಞಾನ ವೃದ್ಧಿ ಅಗತ್ಯ

ತುಮಕೂರು, ಜು. ೨೮- ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ವೈದ್ಯರ ಜ್ಞಾನ ವೃದ್ಧಿ ಅಗತ್ಯವಾಗಿದೆ ಎಂದು ಡಾ. ಇಂಡಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮೊಹಮ್ಮದ್ ಹುಸೇನ್ ಶರೀಫ್. ಕೆ ಅಭಿಪ್ರಾಯಪಟ್ಟರು.


ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು, ಡಾ. ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಹಾಗೂ ಎಚ್‌ಎಂಎಸ್ ಯುನಾನಿ ಮೆಡಿಕಲ್ ಕಾಲೇಜು, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ಅವರ ಸುರಕ್ಷತೆಗೂ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ವೈದ್ಯರು ಕಾರ್ಯೋನ್ಮುಖರಾಗುವ ಅವಶ್ಯಕತೆ ಇದೆ ಎಂದರು.


ಈ ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.


ಸಿಎಮ್‌ಇ ಕಾರ್ಯಕ್ರಮವನ್ನು ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿಕೊಟ್ಟರು:
ಈ ಸಂದರ್ಭದಲ್ಲಿ ಡಾ. ಬಸವರಾಜ ಉಟಗಿ ಹೃದ್ರೋಗ ತಜ್ಞರು. ಡಾ. ಮೊಹಮ್ಮದ್ ಉಸ್ಮಾನ್ ನರರೋಗ ತಜ್ಞರು, ಡಾ. ವರ್ಷಾ ಕ್ಯಾನ್ಸರ್ ತಜ್ಞೆ. ಮುರಳೀಧರ ಹಾಲಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೈಗ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಫರ್ಹಾನಾ, ಡಾ. ಮೊಹಮ್ಮದ್ ಹುಸೇನ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.


ಈ ಸಿಎಮ್‌ಇ ಕಾರ್ಯಕ್ರಮವು ಶೈಕ್ಷಣಿಕ ವಿಚಾರ ವಿನಿಮಯ, ವೈದ್ಯಕೀಯ ಜ್ಞಾನ ಹಂಚಿಕೆ ಹಾಗೂ ಫೋರ್ಟಿಸ್ ಆಸ್ಪತ್ರೆ, ಡಾ. ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಲ ಮತ್ತು ಎಚ್‌ಎಂಎಸ್ ಯುನಾನಿ ಮೆಡಿಕಲ್ ಕಾಲೇಜು ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಯಿತು.


ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ ಎಲ್ಲಾ ಉಪನ್ಯಾಸಕರು, ಗಣ್ಯ ಅತಿಥಿಗಳು, ವೈದ್ಯರು ಹಾಗೂ ಭಾಗವಹಿಸಿದ ಎಲ್ಲರಿಗೂ ಆಯೋಜಕರು ಕೃತಜ್ಞತೆ ಸಲ್ಲಿಸಿದರು.
ಪ್ರವೀಣ್ ಸರ್, ಶಾದಾಬ್ ಸರ್, ಸಯ್ಯದ್ ಸರ್ ಹಾಗೂ ಸಂಪೂರ್ಣ ತಂಡದ ಅಮೂಲ್ಯ ಸಹಕಾರ ಮತ್ತು ಮಾರ್ಗದರ್ಶನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಕಾರ್ಯಕ್ರಮದ ಉಸ್ತುವಾರಿ ಡಾ. ಮೊಹಮ್ಮದ್ ಹುಸೇನ್ ಶರೀಫ್. ಕೆ, ಹಾಗೂ ಪೋರ್ಟಿಸ್ ಆಸ್ಪತ್ರೆಯ ಪ್ರಾದೇಶಿಕ ಮುಖ್ಯಸ್ಥರಾದ ಸಯ್ಯದ್ ಹೇಳಿದರು.