
ಕಲಬುರಗಿ: ಚಾಮರಸನ ಪ್ರಭುಲಿಂಗ ಲೀಲೆಯ ಆರು, ಏಳು, ಎಂಟು ಗತಿಯಲ್ಲಿ ನಿರ್ಮಾಯ ಪ್ರಭು ಯಾರು? ಎಂಬುದನ್ನು ವಿಮಳೆಯ ಮೂಲಕ ಹೇಳಿಸುವ ಪ್ರಸಂಗಗಳಿವೆ. ಮಾಯೆಯನ್ನು ಎಚ್ಚರಿಸುವ ಪ್ರಸಂಗಗಳನ್ನು ಎಣೆಯಲಾಗಿದೆ. ವಿಮಳೆ ಮಾಯೆಯನ್ನುಕರೆದುಕೊಂಡು ಗಿರಿಜೆಯ ಬಳಿಗೆ ಹೋದಾಗ ಅಲ್ಲಮನನ್ನು ಒಲಿಸಿಕೊಳ್ಳಲು ಸಾತ್ವಿಕ ಮಾರ್ಗ ಬೇಕು ಎಂದು ಪರಮೇಶ್ವರಹೇಳುತ್ತಾರೆ.
ಅಲ್ಲಮರ ಸ್ಥಿತಿಯ ಕುರಿತಾಗಿ ಬೇರೆಯವರು ಹೇಳುವುದಕ್ಕಿಂತ ಅಲ್ಲಮರ ದರ್ಶನ ಅವರ ವಚನಗಳಲ್ಲಿದೆ.
ಊಟ ಮಾಡಿದ ಬಳಿಕ ತೊಳೆಯದೆ ಇಟ್ಟಿರುವ ಎಂಜಲು (ಮುಸುರೆ) ಮಡಕೆಯ ಸುತ್ತನೊಣಗಳು ಹೇಗೆ ಮುತ್ತಿಕೊಳ್ಳುತ್ತವೆಯೋ ಹಾಗೆ, ಲೌಕಿಕ ಸುಖ ಹಾಗೂ ಅಧಿಕಾರದ ಆಸೆಯುಳ್ಳ ಜನರು ಅಲ್ಪಸುಖಕ್ಕಾಗಿ ಅಲೆಯುತ್ತಾರೆ. ಕಸದ ಹೊಲ ಮತ್ತು ಪಶುಗಳು ಕಸಕಡ್ಡಿ ತುಂಬಿದ ಹೊಲದಲ್ಲಿ ಪ್ರಾಣಿಗಳು ಮೇವಿಗಾಗಿ ಗುಂಪುಗೂಡುವಂತೆ,ಲಾಲಸೆ ಉಳ್ಳವರು ಒಡವೆ, ವಸ್ತುಗಳ ಹಿಂದೆ ಬೀಳುತ್ತಾರೆ. ಆದರೆ ದೇವರ (ಗುಹೇಶ್ವರನ) ನಿಜವಾದ ಶರಣರು ಇಂತಹ ಯಾವುದೇಲೌಕಿಕ ಆಸೆಗಳ ಪಾಶಕ್ಕೆ ಸಿಲುಕದೆ, ಎಲ್ಲ ಆಸೆಗಳಿಂದ ಮುಕ್ತರಾಗಿ ನಿರಾಳವಾಗಿರುತ್ತಾರೆ.ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಚಿತ್ತಾರದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿದಿಗಂಬರರಂತೆ ಅಲ್ಲಮರುನಡೆದರು.ಹೀಗೆ ಬಯಲ ತತ್ವವನ್ನು ಭೋದಿಸುತ್ತ ವಿದ್ವಾಂಸ, ಜ್ಞಾನಿಗಳೊಂದಿಗೆ ಚರ್ಚೆ, ಸಂವಾದ ನಡೆಸುತ್ತ ಸನ್ಮಾರ್ಗ ತೋರಿಸುತ್ತ ಮಾಯೆಯನ್ನು ಗೆದ್ದು ಪೂರ್ವಾಶ್ರಮವನ್ನು ಧಿಕ್ಕರಿಸಿ ಬನವಸೆ, ಬಳ್ಳಿಗಾವೆ ತೊರೆದು ಲೋಕ ಸಂಚಾರಗೈಯುತ್ತಾರೆ.
- ಪೂಜ್ಯ ಮಹಾಂತ ಸ್ವಾಮಿಗಳು. ಮುದಗಲ್.





























