ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಬೇಕು, ಬೆಳೆ ಪರಿಹಾರ ವಿಮೆ ಬಿಡುಗಡೆ ಮತ್ತು ಬರಕಾಮಗಾರಿ ಪ್ರಾರಂಬಿಸುರುವುದು ಸೇರಿದಂತೆ ಪ್ರಮುಖ 10 ಬೇಡಿಕೆಗೆ ಆಗ್ರಹಿಸಿ ಆರ್.ಪಿ.ಐ (ಅಟವಾಲೆ) ಜಿಲ್ಲಾ ಘಟಕದ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು, ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಎಬಿ ಹೊಸಮನಿ, ಮಲ್ಲಿಕಾರ್ಜುನ ಬಾವಿಕಟ್ಟಿ, ದಿನೇಶ ವೈ, ದತ್ತು ದಿಮ್ಮೆ, ಮಲ್ಲೀಶಿ ಎಸ್.ಹೊನಗುಂಟಿಕರ್, ಸತೀಶ ಮಾಲೆ, ಭೀಮಾಶಂಕರ ಕಟ್ಟಿ ಸಂಗಾವಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.