Home ಜಿಲ್ಲೆ ಕಲಬುರಗಿ ನ್ಯಾಯಬೆಲೆ ಅಂಗಡಿ ಸಮಯ ಪಾಲನೆಗೆ ವೀಕಸೇ ಅಗ್ರಹ

ನ್ಯಾಯಬೆಲೆ ಅಂಗಡಿ ಸಮಯ ಪಾಲನೆಗೆ ವೀಕಸೇ ಅಗ್ರಹ

ಜೇವರಗಿ,ಜು 28: ತಾಲೂಕಿನಲ್ಲಿರುವ ನ್ಯಾಯಬೆಲೆ ಅಂಗಡಿಗಳು ಸರ್ಕಾರ ನಿಗದಿಪಡಿಸಿದ ಸಮಯ ಪಾಲನೆ ಮಾಡಬೇಕೆಂದು ಜೇವರ್ಗಿ ಆಹಾರ ನಿರೀಕ್ಷಣಾಧಿಕಾರಿಗಳಿಗೆ ವೀರ ಕನ್ನಡಿಗರ ಸೇನೆ ಮನವಿ ಪತ್ರ ಸಲ್ಲಿಸಿದೆ. ಸರ್ಕಾರ ಕಳೆದ ತಿಂಗಳು ಹೊರಡಿಸಲಾದ ಆದೇಶದಂತೆ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕೆಂದು ಸರ್ಕಾರ ಸಮಯ ನಿಗದಿ ಮಾಡಿದೆ ಇದರಿಂದ ಗ್ರಾಮೀಣ ಪ್ರದೇಶದ ಜನ ತಮ್ಮ ಕೃಷಿ ಕೆಲಸಕ್ಕೆ ಹೋಗುವ ಮುಂಚೆ ಬೆಳಿಗ್ಗೆ ಆಹಾರ ಪದಾರ್ಥ (ರೇಷನ್)ತೆಗೆದುಕೊಂಡು ಹೋಗಬಹುದು ಹಾಗೆಯೇ ಕೃಷಿ ಕೆಲಸ ಮುಗಿಸಿ ಬಂದು ರಾತ್ರಿ ಸಮಯದಲ್ಲಿಯು ಸಹ ರೇಷನ್ ತೆಗೆದುಕೊಳ್ಳಬಹುದು ಜೊತೆಗೆ ನಗರ ಪ್ರದೇಶದಲ್ಲಿರುವವರು ಸಹ ತಮ್ಮ ಕೆಲಸಕ್ಕೆ ಹೋಗುವ ಮೊದಲು ಕೆಲಸ ಮುಗಿದ ನಂತರವೂ ಸಹ ರೇಷನ್ ತೆಗೆದುಕೊಂಡು ಹೋಗಲು ಅನುಕೂಲವಾಗಿದೆ ಯಾವ ನ್ಯಾಯಬೆಲೆ ಅಂಗಡಿ ಸಮಯ ಪಾಲನೆ ಮಾಡುವುದಿಲ್ಲವೋ ಅಂತಹ ನ್ಯಾಯಬೆಲೆ ಅಂಗಡಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ತೋರಿದರೆ ತಮ್ಮ ಕಾರ್ಯಾಲಯದ ಮುಂದೆ ಸಮಯ ಪಾಲನೆ ಮಾಡದ ನ್ಯಾಯಬೆಲೆ ಅಂಗಂಡಿಯ ಗ್ರಾಹಕರು ಕೂಡಿ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜೇವರ್ಗಿ ವೀರ ಕನ್ನಡಿಗರ ಸೇನೆಯ ತಾಲೂಕಾಧ್ಯಕ್ಷ ಪರಮೇಶ್ವರ ನಾಯಕ ಬಿರಾಳ. ಕಾರ್ಯಧ್ಯಕ್ಷ ಸಿದ್ದಣ್ಣಗೌಡ ಮಾವನೂರ. ಉಪಾಧ್ಯಕ್ಷ ವೆಂಕಟೇಶ್ ಪಟ್ಟೆದಾರ. ನಗರ ಘಟಕ ಗೌರವಧ್ಯಕ್ಷ ಗಾಲಿಬ್ ಗಾಯಕವಾಡ ಇದ್ದರು