
ಜೇವರಗಿ,ಜು 28: ಸರ್ಕಾರದಿಂದ ಗೃಹಜ್ಯೋತಿ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶೌಕತ್ ಅಲಿ ಅಲೂರ ಮನವಿ ಮಾಡಿದರು.
ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ಜೆಸ್ಕಾಂ ಇಲಾಖೆಯ ವತಿಯಿಂದ ನಡೆಯುತ್ತಿರುವ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತಾಲ್ಲೂಕಿನಾದ್ಯಂತ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ಕೈಗೊಂಡಿದ್ದು, ಸಿಬ್ಬಂದಿ ಪರಿಷ್ಕರಣೆಗೆ ಬಂದಾಗಸಾರ್ವಜನಿಕರು ವಿದ್ಯುತ್ ಬಿಲ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ಇತ್ಯಾದಿ ಅಗತ್ಯ ದಾಖಲೆ ಒದಗಿಸಬೇಕು’ ಎಂದು ಮನವಿ ಮಾಡಿದರು.ಗೃಹ ಜ್ಯೋತಿಯನ್ನು ಅರ್ಹ ಪಲಾನುಭವಿಗಳಿಗೆ ಉದ್ದೇಶದಿಂದ ಪರಿಷ್ಕರಣೆಗೆ ಯೋಜನೆ ತಲುಪಿಸುವ ಸರ್ಕಾರವು ಮುಂದಾಗಿದೆ. ದುರುಪಯೋಗ ಅದನ್ನು ಪಡಿಸಿಕೊಳ್ಳಲಾಗುತ್ತಿದ್ದು, ಪತ್ತೆ ಹಚ್ಚಿ ಅರ್ಹ ಪಲಾನುಭವಿಗಳಿಗೆ ಯೋಜನೆ ತಲುಪಿಸುವ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
ಎಇಇ ಲಖನಸಿಂಗ್. ಗ್ಯಾರಂಟಿ ಸಮಿತಿ ಸದಸ್ಯೆ ಅಂಜನಾಬಾಯಿ ರಾಠೋಡ, ರುಕುಂ ತೋಲಾ ಬಾಗವಾನ್
ಹಾಗೂ ಜೆಸ್ಕಾಂ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಇದ್ದರು





























