Home ಜಿಲ್ಲೆ ಕಲಬುರಗಿ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಕೃತಿ ಬದುಕಿನ ಮೌಲ್ಯಗಳ ದಿಕ್ಸೂಚಿ

ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಕೃತಿ ಬದುಕಿನ ಮೌಲ್ಯಗಳ ದಿಕ್ಸೂಚಿ

ಕಲಬುರಗಿ: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ರಾಯಚೂರು, ಕಲಬುರ್ಗಿಯ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮುಂಜಾವಿಗೊಂದು ನುಡಿ ಕಿರಣಗಳ ದರ್ಶನ ಎಂಬ 9 ದಿನಗಳ ವಿಶೇಷ ಪ್ರವಚನ ಮಾಲಿಕೆಯ ನಾಲ್ಕನೇ ದಿನದ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಸುದೀರ್ಘ ಪ್ರವಚನ ನೀಡಿದ ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಮಹಾಂತ ಸ್ವಾಮೀಜಿಯವರು, ಜಸ್ಟಿಸ್ ಶಿವರಾಜ ವಿ. ಪಾಟೀಲರ ನುಡಿ ಕಿರಣದಲ್ಲಿರುವ ಪ್ರಮುಖ ವಾಕ್ಯವಾದ ಕೃತಿ ಹೊತ್ತು ತರುವ ವಿಚಾರಗಳನ್ನು ನೆತ್ತಿಯ ಬುತ್ತಿಯನ್ನಾಗಿಸುವುದು ಸುಲಭವಲ್ಲಎಂಬುದನ್ನು ಸುದೀರ್ಘವಾಗಿ ವಿವರಿಸಿದರು.
ನಾವು ಹುಟ್ಟಿದಾಗ ಉಸಿರಿರುತ್ತದೆ ಹೆಸರಿರುವುದಿಲ್ಲ, ಸತ್ತಾಗ ಉಸಿರು ಇರುವುದಿಲ್ಲ ಹೆಸರಿರುತ್ತದೆ. ಆದ್ದರಿಂದ ಆ ಉಸಿರು ಹೋಗುವ ಮುನ್ನ ನಮ್ಮ ಹೆಸರು ಉಳಿಯುವಂತೆ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಅವರು “ಮುಂಜಾವಿಗೊಂದು ನುಡಿಕಿರಣ-365″ದಲ್ಲಿ ಅರ್ಥಗರ್ಭಿತವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಡಾ. ಶಿವರಾಜ ವಿ. ಪಾಟೀಲರವರ ಮುಂಜಾವಿಗೊಂದು ನುಡಿಕಿರಣಗಳ ದರ್ಶನ ಕೃತಿಯು ಬದುಕಿನ ಮೌಲ್ಯಗಳನ್ನು ಅರಿತು ಆದರ್ಶ ಜೀವನ ನಡೆಸಲು ಬಯಸುವವರಿಗೆ “ಬದುಕಿನ ಭಗವದ್ಗೀತೆ”ಯಂತಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಪೆÇ್ರ. ಚನ್ನಾರೆಡ್ಡಿ ಪಾಟೀಲ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ್, ಪ್ರಾಂಶುಪಾಲ ಪ್ರಶಾಂತ್ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ಅನಿತಾ ಕುಲಕರ್ಣಿ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.