Home ಜಿಲ್ಲೆ ಧರ್ಮಜಾಗೃತಿಗಾಗಿ ದುರ್ಗಾದೌಡ ಯಶಸ್ವಿಗೊಳಿಸಿ : ಮಾತೃಶಕ್ತಿಗೆ ಕರೆ

ಧರ್ಮಜಾಗೃತಿಗಾಗಿ ದುರ್ಗಾದೌಡ ಯಶಸ್ವಿಗೊಳಿಸಿ : ಮಾತೃಶಕ್ತಿಗೆ ಕರೆ

ಮುದ್ದೇಬಿಹಾಳ : ಧರ್ಮಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ದಿ. 16 ಶುಕ್ರವಾರರಂದು ಆಯೋಜಿಸಲಾಗುತ್ತಿರುವ ದುರ್ಗಾದೌಡ್ ಕಾರ್ಯಕ್ರಮವನ್ನು ಎಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕು ಇಂತಹ ಕಾರ್ಯಕ್ರಮಗಳ ಮೂಲಕ ಬೇದ ಭಾವಗಳನ್ನು ಮರೆತು ರಾಷ್ಟ್ರ ಭಕ್ತಿಯನ್ನು ಹೆಚ್ಚಿಸುವ ಸಂಕಲ್ಪ ಮಾಡಬೇಕೆಂದು ಸಮಾಜ ಸೇವಕ ಉದಯಸಿಂಗ್ ರಾಯಚೂರ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಜರುಗಿದ ನವರಾತ್ರೋತ್ಸವ ಅಂಗವಾಗಿ ದುರ್ಗಾದೌಡ ವಿಶೇಷ ದಾರ್ಮಿಕ ಕಾರ್ಯಕ್ರಮದ ಎರಡನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ದುರ್ಗಾದೌಡ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಮಾತೃಶಕ್ತಿಯವರು ಶ್ರಮಿಸುತ್ತಿದ್ದು ಉತ್ತರಕರ್ನಾಟಕಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮ ರೂಪಿಸುವ ಸಂಕಲ್ಪ ಹೊಂದಿದ್ದಾರೆ ಅವರ ಈ ಸಂಘಟನಾ ಶಕ್ತಿ ಹಾಗೂ ಶ್ರಮ ಶ್ಲ್ಯಾಘನೀಯವಾಗಿದೆ ನಮ್ಮ ಸಂಸ್ಕøತಿ ಸಾಹಿತ್ಯ ಹಾಗೂ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮುಂದೆ ಬರಬೇಕಾಗಿದೆ ಇಂತಹ ಧರ್ಮಜಾಗೃತಿ ಮೂಡಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ಇನ್ನೋರ್ವ ಮರಾಠಾ ಸಮಾಜದ ಅಧ್ಯಕ್ಷ ನೇತಾಜಿ ನಲವಡೆ ಅವರು ಮಾತನಾಡಿ ತಾಯಂದಿರು ಒಗ್ಗೂಡಿ ಧರ್ಮದ ಜಾಗೃತಿ ಹಾಗೂ ಸನಾತನ ಪರಂಪರೆಯ ರಕ್ಷಣೆಗೆ ಮುಂದಾದರೆ ಕುಟುಂಬಗಳ ಪರಿವರ್ತನೆಯೊಂದಿಗೆ ಸಮಾಜದಲ್ಲಿಯೂ ಸಹ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ ಧರ್ಮಕ್ಕೆ ಯಾವುದೇ ರೀತಿಯ ಕುಂದುಕೊರತೆಗಳನ್ನು ಬರದಂತೆ ನೋಡಿಕೊಳ್ಳುವಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಕುಟುಂಬದಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿಯನ್ನು ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಿಂಬಿಸುವ ಕಾರ್ಯ ತಾಯಂದಿರ ಮೇಲಿದೆ ಹೀಗಾಗಿ ತಾಯಂದಿರು ಧರ್ಮದ ಭಗ್ಗೆ ಜಾಗೃತರಾಗಿ ದಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದರಿಂದ ಮುಂದಿನ ಪೀಳಿಗೆಗೂ ಸನಾತನ ಧರ್ಮೀಯ ಪರಂಪರೆಯನ್ನು ಪರಿಚಯಿಸುವ ಕಾರ್ಯ ಮಾಡಬೇಕೆಂದರು. ಧರ್ಮ ಜಾಗೃತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವದರಿಂದ ನಮ್ಮ ಸನಾತನ ಧರ್ಮೀಯ ಸಂಪ್ರದಾಯ ಸಂಸ್ಕøತಿ ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಂಡು ಬರಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ತಾಯಂದಿರರ ಪ್ರಯತ್ನದಿಂದಲೇ ದರ್ಮದ ಜಾಗೃತಿಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದರು.
ಸಂಚಲನ ಸಮೀತಿಯ ಶ್ರೀಮತಿ ಸಹನಾ ಬಡಿಗೇರ, ಪುಟ್ಟು ಕುಲಕರ್ಣಿ, ಪರಶುರಾಮ ಪವಾರ ಮಾತನಾಡಿದರು.
ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಥಮ ಬಾರಿಗೆ ಜರುಗುತ್ತಿರುವ ನವರಾತ್ರೋತ್ಸವದ ಈ್ಲ ವಿಶೇಷ ಕಾರ್ಯಕ್ರಮ ಎಲ್ಲಾ ಹಿಂದೂ ಸಮಾಜದ ಬಾಂಧವರು ಸೇರಿ ನವದುರ್ಗೆಯರ ಕಡೆಗೆ ನಮ್ಮ ನಡಿಗೆ(ದುರ್ಗಾದೌಡ) ಕಾರ್ಯಕ್ರಮ ಮಾಡಲಾಗುತ್ತಿದೆ. ನವರಾತ್ರಿಯ 6 ನೇಯ ದಿನ ಅಕ್ಟೋಬರ್ 16 ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಮದ್ಯಾಹ್ನ 3 ಗಂಟೆಗೆ ಪಟ್ಟಣದ ಎಲ್ಲಾ ಶಕ್ತಿದೇವತೆಗಳ ಮಂದಿರಗಳ ದರ್ಶನಗಳ ನಡಿಗೆಗೆ ಚಾಲನೆಯನ್ನು ನೀಡಲಾಗುತ್ತದೆ. ಶ್ರೀ ನಾಡದೇವಿಯ ಭವ್ಯ ಭಾವಚಿತ್ರವನ್ನು ಅಲಂಕೃತ ಸಾರೋಟದಲ್ಲಿ ಮೆರವಣಿಗೆ ಮಾಡಲಾಗುತ್ತದೆ ಅಲ್ಲದೇ ಭವ್ಯ ಸಂಚಲನದಲ್ಲಿ ನವದುರ್ಗೆಯರ ವೇಷಧಾರಣೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಗಮನ ಸೆಳೆಯಲಿದ್ದಾರೆಂದರು.
ಮೆರವಣಿಗೆ ಬನಶಂಕರಿ ದೇವಸ್ಥಾನದಿಂದ ಆರಂಭವಾಗಿ ಗ್ರಾಮದೇವತೆ ಕಟ್ಟೆ, ಸರಾಫ ಬಜಾರ್ ಮಾರ್ಗವಾಗಿ ಕಿಲ್ಲಾಗಲ್ಲಿಯ ಕಾಳಿಕಾದೇವಿ ಮಂದಿರ, ಕುಂಬಾರ ಓಣಿಯ ಗ್ರಾಮದೇವತೆ ಮಂದಿರ, ನೇತಾಜಿ ಗಲ್ಲಿಯ ದೇವಿಯರ ಮಂದಿರ, ಪುನಃ ಗ್ರಾಮದೇವತೆ ಕಟ್ಟೆ ದುರ್ಗಾದೇವಿ ಹಾಗೂ ಭವಾನಿ ದೇವಿ ದರ್ಶನ ಪೂಜೆ ಸಲ್ಲಿಸಿ ಬಸವೇಶ್ವರ ವೃತ್ತ ಮಾರ್ಗದಿಂದ ತಂಗಡಗಿ ರಸ್ತೆ ಲಕ್ಷ್ಮೀ ಚಿತ್ರ ಮಂದಿರ ಹಿಂಭಾಗದ ಅಂಬಾಭವಾನಿ ಮಂದಿರ, ಮತ್ತೆ ಬಸವೇಶ್ವರ ವೃತ್ತದಿಂದ ಏಳು ಮಕ್ಕಳ ತಾಯಿ ಮಂದಿರ, ಲಕ್ಷ್ಮೀ ವೆಂಕಟೇಶ್ವರ ಮಂದಿರ, ದುರ್ಗಾ ಮಂದಿರ, ಶ್ರೀ ಶಾರದಾ ದೇವಿ ಮಂದಿರ ಪಟ್ಟಣದ ಸುಮಾರು ಕಿಲೋ ಮೀಟರ್ ಅಂತರದಲ್ಲಿರುವ ಪದ್ಮಾವತಿ ದೇವಿ ದೇವಸ್ಥಾನ ಹಾಗೂ ಪಿಲೇಕಮ್ಮ ದೇವಸ್ಥಾನಗಳಿಗೆ ಮಹಾಪೂಜೆ ಸಲ್ಲಿಸಿ ನಂತರ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಸಭೆಯಾಗಿ ಮಾರ್ಪಡಲಿದೆ.
ಸಾಯಂಕಾಲ 6 ಗಂಟೆಗೆ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು ನಂತರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ಕೋಲಾಟ, ಭರತನಾಟ್ಯ ನೃತ್ಯಗಳು ಜರುಗಲಿವೆ. ಸಮಾರೋಪ ಉದ್ದೇಶಿಸಿ ದಿಕ್ಸೂಚಿ ಭಾಷಣವನ್ನು ವಿಶೇಷ ಅತಿಥಿಗಳಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಮೋಹನಲಾಲ್ ಓಸ್ವಾಲ್, ಸಂಜಯ ಓಸ್ವಾಲ್, ಶ್ರೀನಿವಾಸ ಇಲ್ಲೂರ, ಯಶವಂತ ಕಲಾಲ್, ವಾಸು ಚಿತ್ರಗಾರ, ಪ್ರಕಾಶ ಸರಾಪ್, ಮುತ್ತಣ್ಣ ಇಲ್ಲೂರ, ವಿಜಯಕುಮಾರ್ ಬಡಿಗೇರ, ಮಂಜುನಾಥ ಪೇಟಗಾರ, ನಾರಾಯಣ ಮಿರಜಕರ, ಅನಿಲ್ ಕುಲಕರ್ಣಿ, ಹಾಗೂ ಪುಷ್ಪಾವತಿ ಪತ್ತಾರ, ಶೋಭಾ ಘಾಟಿಗೆ, ಜ್ಯೋತಿ ಮಾಯಾಚಾರಿ, ಸ್ನೇಹಾ ನಲವಡೆ, ನೀಲಾ ತೇಲಂಗಿ, ಸುನೀತಾ ಘಾಟಗೆ, ಶಾರಧಾ ಘಾಟಗೆ, ಕಾವೇರಿ ಕಲಾಲ್, ಗಾಯತ್ರಿ ದೇಶಪಾಂಡೆ, ಪದ್ಮ ಲೋಕರೆ, ಅಶ್ವನಿ ಝಿಗಾಂಡೆ, ಪ್ರಭಾ ಹೆಬ್ಬಾರ, ಮಧು ಇಲ್ಲೂರ, ರಜನಿ ಓಸ್ವಾಲ್, ಶೈಲಾ ಗೊಂಗಡಿ, ವಿಜಯಲಕ್ಷ್ಮೀ ನಲವಡೆ, ಸಂಗೀತಾ ಘಾಟಗೆ, ಸುಜಾತಾ ಭೋಸಲೆ, ಅನೀತಾ ಚವ್ಹಾಣ, ಅಂಬುಜಾ ಚಿತ್ರಗಾರ, ಬಸಮ್ಮ ಚಿನ್ನಾಕಾರ, ಸೇರಿದಂತೆ ಹಿಂದೂ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.