Home ಜಿಲ್ಲೆ ಕಲಬುರಗಿ ಪತ್ನಿ, ಮಗಳ ಕೊಂದವನಿಗೆ ಜೀವಾವಧಿ ಶಿಕ್ಷೆ

ಪತ್ನಿ, ಮಗಳ ಕೊಂದವನಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಆ 26: ಪತ್ನಿ ಮತ್ತು 11 ವರ್ಷದ ಮಗಳನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೇಡಂ ಪೀಠದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ಆದೇಶಿಸಿದ್ದಾರೆ.
ಕಲಬುರಗಿಯ ದಿಗಂಬರ ಶಿಕ್ಷೆಗೀಡಾದ ವ್ಯಕ್ತಿ. ದಿಗಂಬರನು ತನ್ನ ಪತ್ನಿ ಜಗದೀಶ್ವರಿ, 11 ವರ್ಷದ ಪುತ್ರಿಯನ್ನು ಕೊಲೆಗೈದಿದ್ದ.
ದಿಗಂಬರ ಜತೆ ಸೇಡಂನ ಜಗದೀಶ್ವರಿ ಮದುವೆಯಾಗಿದ್ದು, 11 ವರ್ಷದ ಪುತ್ರಿ ಇದ್ದಳು. ಎರಡು ವರ್ಷದಿಂದ ಪತ್ನಿಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುತ್ತಿದ್ದ. ಜಗದೀಶ್ವರಿ ಕುಟುಂಬಸ್ಥರು ತಿಳಿವಳಿಕೆ ಹೇಳಿದ್ದರೂ ಕಿರುಕುಳ ಮುಂದುವರಿಸಿದ್ದ. ತಾಳಲಾರದೆ ಜಗದೀಶ್ವರಿ ಮತ್ತು ಪುತ್ರಿಯನ್ನು ಸೇಡಂನಲ್ಲಿ ಬಾಡಿಗೆ ಮನೆಯಲ್ಲಿ ಇಡಲಾಗಿತ್ತು. ಅಲ್ಲೂ ಕಿರುಕುಳ ನೀಡುತ್ತಿದ್ದ.
2021ರ ಸೆ.22ರಂದು ರಾತ್ರಿ ದಿಗಂಬರ ಜಗಳ ತೆಗೆದಿದ್ದಾಗ ಜಗದೀಶ್ವರಿ ತವರು ಮನೆಯವರು ತಿಳಿವಳಿಕೆ ಹೇಳಿ ಹೋಗಿದ್ದರು. ಆದರೆ ಸೆ.23ರಂದು ಮಧ್ಯರಾತ್ರಿ ಜಗದೀಶ್ವರಿ ಮತ್ತು ಪುತ್ರಿ ಮಲಗಿದ್ದಾಗ ಕಟ್ಟಿಗೆಯಿಂದ ಹೊಡೆದು ಹತ್ಯೆಮಾಡಿದ್ದ. ಬಳಿಕ ಆಕೆ ಸಹೋದರಿ, ಸಹೋದರನಿಗೆ ಕರೆ ಮಾಡಿ ತಾಯಿ ಮಗಳು ಇಬ್ಬರನ್ನು ಕೊಂದಿದ್ದೇನೆ ಎಂದು ತಿಳಿಸಿದ್ದ. ಸೇಡಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸಿಪಿಐ ರಾಜಶೇಖರ ಹಳಗೋದಿ ಅವರು ಕೋಟ್9ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಕೆ.ಆರ್. ನಾಗರಾಜ ಮಸ್ಕಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.