
ಗಳಗಿಹುಲಕೊಪ್ಪ,ಜು೨೫: ಬೋಧನಾ ವೃತ್ತಿಗೆ ಪೂರಕವಾದ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಕ್ರಿಯಾಪ್ರೇರಕ ಬೋಧನೆಯನ್ನು ರೂಢಿಸಿಕೊಂಡಿದ್ದ ಆರ್.ಸಿ.ಹಿರೇಮಠ ಅವರು ವಿದ್ಯಾರ್ಥಿಗಳು ಮೆಚ್ಚಿದ ಆದರ್ಶ ಶಿಕ್ಷಕರಾಗಿದ್ದಾರೆ ಎಂದು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಶಾಂತಾ ಮೀಸಿ ಹೇಳಿದರು.
ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ ತಮ್ಮ ಶಾಲೆಯ ಸಹ ಶಿಕ್ಷಕ ಆರ್.ಸಿ. ಹಿರೇಮಠ ಅವರ ಅಭಿನಂದನಾ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿದ್ದ ವಿಶ್ರಾಂತ ಹಿರಿಯ ಅಧ್ಯಾಪಕ ಆರ್.ವ್ಹಿ. ಪತ್ತಾರ ಮಾತನಾಡಿದರು.
ನಿವೃತ್ತ ಪ್ರಾಚಾರ್ಯರುಗಳಾದ ಪ್ರೊ. ಎಂ.ಎನ್. ಸಿಂಗನÀಳ್ಳಿ, ಪ್ರೊ. ಸಿ.ಎಸ್. ಹಿರೇಮಠ, ನಿವೃತ್ತ ಉಪನ್ಯಾಸಕ ಎಸ್.ಪಿ. ಸುವರ್ಣಕರ, ನಿವೃತ್ತ ಮುಖ್ಯಾಧ್ಯಾಪಕ ಎನ್.ಜಿ. ಭಟ್ಟ, ಪ.ಪೂ. ಕಾಲೇಜು ಪ್ರಾಚಾರ್ಯ ಆರ್.ಜೆ. ಲಮಾಣಿ, ಎಂ.ಬಿ. ತಡಸಮಠ, ಎಂ.ಬಿ. ಮಠಪತಿ, ಬಿ.ಕೆ.ಪಾಟೀಲ, ಮಾನಪ್ಪ ಶಿಂಗನಳ್ಳಿ, ಆರ್.ಬಿ. ಚವ್ಹಾಣ, ಜಿ. ಎಸ್.ಚರಂತಿಮಠ ಪಾಲ್ಗೊಂಡಿದ್ದರು.
ಶಿಕ್ಷಕ ಸಿ.ಸಿ. ಹಿರೇಮಠ ಸ್ವಾಗತಿಸಿದರು. ನಿಂಗಪ್ಪ ಬ್ಯಾಹಟ್ಟಿಹಾಗೂ ಎಂ.ವೈ. ಕಬ್ಬೂರ ನಿರೂಪಿಸಿದರು. ಅಭಿಷೇಕ ರಾಯಕೊಪ್ಪ ವಂದಿಸಿದರು.































