Home ಜಿಲ್ಲೆ ಇಪಿಎಸ್ ೯೫ ಎನ್‌ಎಸಿ ಪಿಂಚಣಿದಾರರ ಜಿಲ್ಲಾ ಸಮಾವೇಶಬೇಡಿಕೆ ಈಡೇರಿಕೆಗೆ ಹೋರಾಟ: ಪಿಂಚಣಿದಾರರ ನಿರ್ಧಾರ

ಇಪಿಎಸ್ ೯೫ ಎನ್‌ಎಸಿ ಪಿಂಚಣಿದಾರರ ಜಿಲ್ಲಾ ಸಮಾವೇಶಬೇಡಿಕೆ ಈಡೇರಿಕೆಗೆ ಹೋರಾಟ: ಪಿಂಚಣಿದಾರರ ನಿರ್ಧಾರ

ಬೀದರ್: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ೯೫ ಎನ್‌ಎಸಿ ಪಿಂಚಣಿದಾರರು ಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ನಗರದ ಪಾಪನಾಶ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ಈಚೆಗೆ ನಡೆದ ಇಪಿಎಸ್ ೯೫ ಎನ್‌ಎಸಿ ಪಿಂಚಣಿದಾರರ ಜಿಲ್ಲಾ ಸಮಾವೇಶದಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಂಡರು.
ಕನಿಷ್ಠ ರೂ. ೭,೫೦೦ ಪಿಂಚಣಿ, ತುಟ್ಟಿ ಭತ್ತೆ ನೀಡಬೇಕು, ಮಹಿಳೆಯರಿಗೆ ಶೇಕಡ ೧೦೦ ರಷ್ಟು ಪಿಂಚಣಿ ಕೊಡಬೇಕು, ಗರಿಷ್ಠ ಪಿಂಚಣಿಗೆ ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕು ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗಳು ಈಡೇರುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
ಪಿಂಚಣಿದಾರರ ಅನುಕೂಲಕ್ಕಾಗಿ ನಗರದಲ್ಲಿ ಎರಡನೇ ಮಹಡಿಯಲ್ಲಿರುವ ಪಿ.ಎಫ್. ಕಚೇರಿಯನ್ನು ನೆಲಮಹಡಿಗೆ ಸ್ಥಳಾಂತರಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಮಾವೇಶ ಉದ್ಘಾಟಿಸಿದ ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ, ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸಂಘರ್ಷ ಸಮಿತಿಯ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಶೆಟಕಾರ್, ರಾಜ್ಯ ಖಜಾಂಚಿ ಎಸ್.ಎನ್. ಕುಲಕರ್ಣಿ, ಶಾಮರಾವ್ ಇಟಗಿಕರ್ ಅವರು ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ನ್ಯಾಯಯುತ ಬೇಡಿಕೆಗಳ ಕುರಿತು ಮಾತನಾಡಿದರು.
ರಾಷ್ಟ್ರೀಯ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಪದಾಧಿಕಾರಿಗಳಾದ ಬಸಯ್ಯ ಸ್ವಾಮಿ, ಅಣ್ಣೆಪ್ಪ, ವಿ.ಟಿ. ಬೆಲ್ಲಾಳೆ, ಬಾಬು ಸ್ವಾಮಿ, ರವಿಕಾಂತ ಬೆಲ್ಲದಾರ್, ನೀಲಕಂಠ, ಕಮಲಾಕರ್, ಬಸವರಾಜ ಪಾಟೀಲ, ಚೌಕಿಮಠ ಸ್ವಾಮಿ, ಇಕ್ಬಾಲ್ ಮತ್ತಿತರರು ಇದ್ದರು.
ಸತ್ಯಕುಮಾರ ನಿರೂಪಿಸಿದರು. ದೇಶಪಾಂಡೆ ವಂದಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಿ.ಎನ್.ಡಿ. ಕಾಲೇಜು, ಪಿಎಲ್‌ಡಿ ಬ್ಯಾಂಕ್, ಡಿಸಿಸಿ ಬ್ಯಾಂಕ್, ಗಾಂಧಿಗAಜ್ ಸಹಕಾರ ಬ್ಯಾಂಕ್ ಹಾಗೂ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ೩೦೦ಕ್ಕೂ ಹೆಚ್ಚು ನಿವೃತ್ತ ಪಿಂಚಣಿದಾರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.