Home ಜಿಲ್ಲೆ ಕಲಬುರಗಿ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್

ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್

ಕಲಬುರಗಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹಾಗೂ ಶಾಂತಿನಗರದ ಶಾಸಕರಾದ ಎನ್.ಎ. ಹ್ಯಾರಿಸ್ ಅವರು, ಬುಧವಾರ ಗುಲ್ಬರ್ಗಾದ ಬಡಿ ದೇವಡಿಗೆ ಭೇಟಿ ನೀಡಿದ ಅವರು, ದರಗಾ ಹಜರತ್ ಖಾಜಾ ಬಂದನವಾಜ್ (ರಹ.) ಅವರ ಸಜ್ಜಾದಾ ನಶೀನ್ ಹಜರತ್ ಡಾ. ಹಾಫಿಜ್ ಸಯ್ಯಿದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲಿ ಹಜರತ್ ಖಾಜಾ ಬಂದಾನವಾಜ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಗುಂಬದ್-ಎ-ಮುಬಾರಕ್‍ನಲ್ಲಿ ಗುಲ್-ಎ-ಅಕೀದತ್ ಸಮರ್ಪಿಸಿ ದುವಾ ಸಲ್ಲಿಸಿದರು. ಸಜ್ಜಾದಾ ನಶೀನ್ ಅವರಿಗೆ ತಬರ್ರುಕಾತ್ ನೀಡಿದರು. ಡಾ. ಸಯ್ಯಿದ್ ಮುಸ್ತಫಾ ಅಲ್-ಹುಸೈನಿ ಸಾಹೇಬ್ ಶ್ರೀಮತಿ ಬಿಲ್ಕೀಸ್ ಬಾನು, ಒಐಅ ಅವರಿಗೂ ತಬರ್ರುಕಾತ್ ನೀಡಲಾಯಿತು.
ನಂತರ ಹಜರತ್ ಸಜ್ಜಾದಾ ನಶೀನ್ ಅವರು ಎನ್.ಎ. ಹ್ಯಾರಿಸ್ ಅವರಿಗೆ ದರ್ಗಾ ಶರೀಫ್‍ನ ವಿವಿಧ ಸ್ಥಳಗಳನ್ನು ತೋರಿಸಿ, ದರ್ಗಾದ ಹಳೆಯ ವಾಸ್ತುಶಿಲ್ಪ, ಅದರ ಐತಿಹಾಸಿಕ ಮಹತ್ವ ಹಾಗೂ ವಿನ್ಯಾಸದ ಕುರಿತು ವಿವರವಾದ ಮಾಹಿತಿ ನೀಡಿದರು.
ಸಯ್ಯಿದ್ ಮುಹಮ್ಮದ್ ಗೇಸುದರಾಜ್ ಸಂಶೋಧನಾ ಅಕಾಡೆಮಿಗೆ ಭೇಟಿ ನೀಡಿದರು. ಇಲ್ಲಿ 1960ರಿಂದ 2026ರವರೆಗಿನ ಶಹಬಾಜ್ ಬುಕ್‍ನ ಸಂಪೂರ್ಣ ಸಂಗ್ರಹವನ್ನು ಉದ್ಘಾಟಿಸಲಾಯಿತು.
ಈ ಸಂಶೋಧನಾ ಸಂಗ್ರಹದಲ್ಲಿ ದರ್ಗಾ ಹಜರತ್ ಖಾಜಾ ಬಂದನವಾಜ್ (ರಹ.) ಅವರ ಉರ್ಸ್ ಮುಬಾರಕ್ ಸಂದರ್ಭದಲ್ಲಿ ಪ್ರತಿವರ್ಷ ನಡೆಯುವ ಸೆಮಿನಾರ್‍ಗಳಲ್ಲಿ ಮಂಡಿಸಲಾಗುವ ಸಂಶೋಧನಾ ಲೇಖನಗಳನ್ನು ಒಳಗೊಂಡಿರುತ್ತದೆ. ಈ ಲೇಖನಗಳನ್ನು ನಂತರ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಯ್ಯಿದ್ ಮುರ್ತಜಾ ಹುಸೈನಿ ಸಾಹೇಬ್, ಸಯ್ಯಿದ್ ಅಕೀಬ್ ಹುಸೈನಿ ಸಾಹೇಬ್, ಸಯ್ಯಿದ್ ಹೈದರ್ ಪಾಷಾ ಸಾಹೇಬ್, ಮಾಜಿ ಸಚಿವ ರಹೀಮ್ ಖಾನ್, ಏUಆಂ ಅಧ್ಯಕ್ಷ ಮಝರ್ ಆಲಂ ಖಾನ್, ಏಒP ಉಪಮೇಯರ್ ಖುಸ್ರೋ ಜಹಾಗಿರ್ದಾರ್, ಏPಅಅ ಸದಸ್ಯ ಫರಾಝ್-ಉಲ್-ಇಸ್ಲಾಂ, ಇಲಿಯಾಸ್ ಸೇಠ್ ಬಾಗವಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.