Home ಜಿಲ್ಲೆ ಕಲಬುರಗಿ ಅಂಡರಪಾಸ್ ಸ್ವಸ್ಛಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿ

ಅಂಡರಪಾಸ್ ಸ್ವಸ್ಛಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿ

ಕಲಬುರಗಿ,ಅ.8-ನಗರದ ಜೇವರ್ಗಿ ಕಾಲೋನಿ, ದತ್ತ ನಗರ ಬಳಿಯ ರೈಲ್ವೆ ಕಿ.ಮೀ. 566/1 ಮತ್ತು 566/2 ರ ಅಂಡರ್-ಪಾಸ್ ಸ್ವಚ್ಛಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಜೇವರ್ಗಿ ಕಾಲೋನಿ, ದತ್ತ ನಗರ, ಬಿದ್ದಾಪುರ ಕಾಲೋನಿ ಮತ್ತು ಸಿಐವಿ ಕಾಲೋನಿ ನಿವಾಸಿಗಳು ಮನವಿ ಮಾಡಿದ್ದಾರೆ.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿರುವ ಅವರು, ರೈಲ್ವೆ ಇಲಾಖೆಯು ಹೊಸ ಜೇವರ್ಗಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣದ ಜೊತೆಗೆ 566/1 ಮತ್ತು 566/2 ರಲ್ಲಿ ಎರಡು ಅಂಡರ್-ಪಾಸ್ ಗಳನ್ನು ನಿರ್ಮಿಸಿದೆ. ಆದರೆ ಇಂದಿಗೂ ಅದು ಬಳಕೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಎರಡು ಚರಂಡಿಗಳನ್ನು ಈ ಬ್ರಿಡ್ಜ್ ಕೆಳಗೆ ಬಿಡಲಾಗಿದೆ. ಇದರಿಂದ ಕೊಳಚೆ ನೀರು ಶಾಶ್ವತವಾಗಿ ನಿಂತಿದೆ. ಈ ಕಲುಷಿತ ನೀರು ಇಂಗಿ ಬಡಾವಣೆಯ ಸಾರ್ವಜನಿಕ ಕುಡಿಯುವ ಬೋರ್‍ವೆಲ್ ನೀರು ಸಂಪೂರ್ಣ ಕಲುಷಿತಗೊಂಡಿದೆ. ಜನರ ಆರೋಗ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ. ಈ ಬ್ರಿಡ್ಜ್ ಪ್ರಾರಂಭವಾದರೆ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಸೂಪರ್ ಮಾರ್ಕೆಟ್ ಕೇವಲ 1 ಕಿ.ಮೀ. ಅಂತರದಲ್ಲಿ ಬರುತ್ತದೆ. ಇಲ್ಲದಿದ್ದರೆ ನಾವು 4 ಕಿ.ಮೀ. ಸುತ್ತು ಹಾಕಿ ಹೊಸ ಜೀವರ್ಗಿ ರಸ್ತೆ ಮೇಲ್ವೇತುವೆ ಮೂಲಕ ಹೋಗಬೇಕಾಗಿದೆ. ಈ ಅಂಡರ್-ಪಾಸ್ ತೆರೆದರೆ ಸಾವಿರಾರು ವಿದ್ಯಾರ್ಥಿಗಳು, ನೌಕರರು ಮತ್ತು ನಾಗರಿಕರಿಗೆ ಪ್ರತಿದಿನ ಪೆಟ್ರೋಲ್ ಮತ್ತು ಸಮಯ ಉಳಿತಾಯವಾಗುತ್ತದೆ. ಹೊಸ ಜೇವರ್ಗಿ ರಸ್ತೆ ಮೇಲ್ಸೆತುವೆ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದ್ದರಿಂದ ಪಾಲಿಕೆಯ ಚರಂಡಿ ನೀರನ್ನು ಬ್ರಿಡ್ಜ್ ಕೆಳಗಿನಿಂದ ಬೇರೆಡೆಗೆ ತಿರುಗಿಸಲು ಆದೇಶಿಸಬೇಕು. ರಬ್‍ನಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಿ, ನೆಲವನ್ನು ಸಮತಟ್ಟು ಮಾಡಿ, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು, ಸಾರ್ವಜನಿಕರು, ದ್ವಿಚಕ್ರ ವಾಹನಗಳು ಮತ್ತು ಆಟೋಗಳು ಓಡಾಡಲು ಅನುವು ಮಾಡಿಕೊಡಬೇಕು ಇದರಿಂದÀ ಸುಮಾರು 20,000 ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.