Home ಜಿಲ್ಲೆ ಬೆಂಗಳೂರು ಕೆಜಿಎಫ್ ನಗರಸಭೆ ಮೀಸಲಾತಿ ಪಟ್ಟಿ ಸಿದ್ದತೆ ಬಗ್ಗೆ ಚರ್ಚೆ

ಕೆಜಿಎಫ್ ನಗರಸಭೆ ಮೀಸಲಾತಿ ಪಟ್ಟಿ ಸಿದ್ದತೆ ಬಗ್ಗೆ ಚರ್ಚೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;

ಕೆಜಿಎಫ್, ಅ. ೮: ನಗರಸಭೆ ಚುನಾವಣೆ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಕುರಿತು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಚರ್ಚೆ ನಡೆದಿದೆ ಎಂಬ ಸುದ್ದಿ ಕೆಜಿಎಫ್ ನಗರದಲ್ಲಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರನ್ನು ಕರೆದು ನಗರಸಭೆಯ ವಾರ್ಡ್ವಾರು ಮೀಸಲಾತಿ ಪಟ್ಟಿಯ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.ಇದರಿಂದ ಚುನಾವಣೆಯ ನಿರೀಕ್ಷೆಯಲ್ಲಿರುವ ಹಾಲಿ ಹಾಗೂ ಮಾಜಿ ನಗರಸಭೆ ಸದಸ್ಯರಲ್ಲಿ ಕುತೂಹಲದ ಜೊತೆಗೆ ಆತಂಕವೂ ಹೆಚ್ಚಾಗಿದೆ.


ಕೆಜಿಎಫ್ ನಗರಸಭೆಯ ಆಡಳಿತ ಮಂಡಳಿಯ ಅವಧಿ ಮುಗಿದು ಈಗಾಗಲೇ ಒಂದು ವರ್ಷ ಕಳೆದಿದೆ. ಚುನಾವಣೆ ಮಿತಿಯಿಲ್ಲದಿರುವ ಹಿನ್ನೆಲೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರ ನಡುವೆ ದಿನನಿತ್ಯ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಮುಖ್ಯವಾಗಿ, ಮುಂದಿನ ಚುನಾವಣೆಯಲ್ಲಿ ತಮ್ಮ ವಾರ್ಡ್ ಯಾವ ವರ್ಗಕ್ಕೆ ಮೀಸಲಾಗಲಿದೆ ಎಂಬುದು ಸದಸ್ಯರ ಪ್ರಮುಖ ಚಿಂತೆಯಾಗಿದೆ. ಶಾಸಕರ ಬಳಿ ಸದಸ್ಯರ ದೌಡು, ಮೀಸಲಾತಿ ಪಟ್ಟಿ ಸಿದ್ಧಪಡಿಸಲು ಪ್ರಕ್ರಿಯೆ ಆರಂಭವಾಗಬಹುದು ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಹಲವರು ಶಾಸಕರನ್ನು ಸಂಪರ್ಕಿಸಿ ತಮ್ಮ ವಾರ್ಡ್ಗಳಿಗೆ ಅನುಕೂಲವಾಗುವಂತೆ ಅರ್ಜಿಸುತ್ತಿದ್ದಾರೆ.


ಶಾಸಕರ ಜೊತೆ ನಡೆದ ಸಭೆಯ ನಂತರ, ಮೀಸಲಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ನಗರಸಭೆ ಚುನಾವಣೆಯ ಮೀಸಲಾತಿ ಪಟ್ಟಿ ಹೊರಬಂದ ಬಳಿಕ ಹಲವು ಹಾಲಿ ಹಾಗೂ ಮಾಜಿ ಸದಸ್ಯರ ರಾಜಕೀಯ ಭವಿಷ್ಯದಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಭಾರತೀಯ ರಾಜಕೀಯ ಲೆಕ್ಕಾಚಾರಗಳಲ್ಲಿ ಕಂಡುಬರುತ್ತಿದೆ.


ಮಾಜಿ ನಗರಸಭೆ ಸದಸ್ಯರಾದ ವಳ್ಳಲ್ ಮುನಿಸ್ವಾಮಿ, ರಮೇಶ್ ಜೈನ್, ಜಯಂತಿ ಶ್ರೀನಿವಾಸ್ ಸೇರಿದಂತೆ ಪ್ರಮುಖ ಮುಖಂಡರ ಪರಿಕಲ್ಪ ಮೀಸಲಾತಿ ಪಟ್ಟಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ.


ಒಂದೆಡೆ ಮೀಸಲಾತಿ ಚರ್ಚೆ ಜೋರಾಗಿದ್ದು, ಮತ್ತೊಂದೆಡೆ ಈ ವರ್ಷವೇ ನಗರಸಭೆ ಚುನಾವಣೆ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಚುನಾವಣಾ ದಿನಾಂಕಕ್ಕೂ ಮುನ್ನೇ ಮೀಸಲಾತಿ ಪಟ್ಟಿ ರಾಜಕೀಯವಾಗಿ ಪ್ರಮುಖ ವಿಷಯವಾಗಿ ಪರಿಣಮಿಸಿದೆ.


ಮೀಸಲಾತಿ ಪಟ್ಟಿ ಅಧಿಕೃತವಾಗಿ ಪ್ರಕಟವಾದ ನಂತರವೇ ಯಾರ ವಾರ್ಡ್ ಉಳಿಯಲಿದೆ ಎಂಬುದು ಸ್ಪಷ್ಟವಾಗಲಿದೆ. ಆದರೆ ಇದಕ್ಕೂ ಮುನ್ನವೇ ಸದಸ್ಯರು ಶಾಸಕರ ಬೆನ್ನುಬಿದ್ದಿರುವುದು ಕೆಜಿಎಫ್ ನಗರಸಭೆ ಚುನಾವಣೆಯ ರಾಜಕೀಯ ಕಾವು ಹೆಚ್ಚಿದೆ.