Home ಜಿಲ್ಲೆ ಬೆಂಗಳೂರು ನ್ಯಾಚುರಲ್ ಬರ್ತಿಂಗ್ ಸೆಂಟರ್ ಉದ್ಘಾಟನೆ

ನ್ಯಾಚುರಲ್ ಬರ್ತಿಂಗ್ ಸೆಂಟರ್ ಉದ್ಘಾಟನೆ

ಕೆಆರ್ ಪುರ,ಅ.೯- ಗರ್ಭಿಣಿ ಮಹಿಳೆಗೆ ಪ್ರಸವ ಸಂದರ್ಭದಲ್ಲಿ ಸಿಸೇರಿಯನ್ ಕಡಿಮೆ ಮಾಡಿ ನ್ಯಾಚುರಲ್ ಬರ್ತಿಂಗ್ ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸೆಂಟರ್ ಅನ್ನು ಉದ್ಘಾಟನೆ ಮಾಡಿದ್ದೇವೆ ಎಂದು ಓವಂ ಆಸ್ಪತ್ರೆಯ ಅಧ್ಯಕ್ಷರು, ಸಿಇಒ ಹಾಗೂ ಮಕ್ಕಳ ತಜ್ಞ ರಾದ ಡಾ.ಆದರ್ಶ್ ಸೋಮಶೇಖರ್ ಹೇಳಿದರು.


ಕಲ್ಯಾಣ ನಗರದ ಓವಂ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ನ್ಯಾಚುರಲ್ ಬರ್ತಿಂಗ್ ಸೆಂಟರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.


೨೦೧೪ ರಿಂದ ಆರಂಭ ಓವಂ ಆಸ್ಪತ್ರೆ ಆರಂಭಿಸಿದ್ದು ಬೆಂಗಳೂರಿನಾದ್ಯಂತ ೭ ಬ್ರಾಂಚ್ ಹಾಗೂ ಕ್ಲಿನಿಕ್ ಗಳನ್ನು ಹೊಂದಿದೆ. ಈ ಭಾಗದಲ್ಲಿ ಮೊದಲ ಬಾರಿಗೆ ವಾಟರ್ ಬರ್ತಿಂಗ್ ಹಾಗೂ ನ್ಯಾಚುರಲ್ ಬರ್ತಿಂಗ್ ಸೆಂಟರ್ ತೆರೆಯುವ ಮೂಲಕ ಮಹಿಳೆಯರ ಕೋರಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಹೇಳಿದರು.


ಹೆರಿಗೆ ಆಗುವಾಗ ಯಾವುದೇ ರೀತಿಯ ಮೆಡಿಸನ್ ನೀಡುವುದಿಲ್ಲ, ನಾರ್ಮಲ್ ಹೆರಿಗೆಗೆ ಪ್ರೋತ್ಸಾಹ ನೀಡಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಕಡಿಮೆ ಮಾಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.


ಮಹಿಳೆ ಗರ್ಭಿಣಿಯಾದ ಆದ ಮೂರು ತಿಂಗಳಿಂದ ಫಿಸಿಯೋಥೆರಪಿ, ಯೋಗ, ವ್ಯಾಯಾಮ ನೀಡಿ ತಯಾರು ಮಾಡಬೇಕು, ಮಹಿಳೆಗೆ ಆತ್ಮವಿಶ್ವಾಸ ಬರುವ ಹಾಗೆ ಮಾಡಲಾಗುತ್ತದೆ.


ನ್ಯಾಚುರಲ್ ಬರ್ತಿಂಗ್ ಒಬ್ಬರಿಂದ ನಡೆಯೋದಿಲ್ಲ, ವೈದ್ಯರು, ಡ್ಯುಟಿ ನರ್ಸಸ್, ಯೋಗ ಇನ್ಸ್ಟ್ರಕಟರ್, ಡೆಲವರಿ ಎಕ್ಸಪರ್ಟ್ , ತಾಯಿ ಕೇರ್ ಮಾಡುವವರು, ಈ ಎಲ್ಲಾ ತಂಡವನ್ನು ಪ್ರಗ್ನೆಂಟ್ ಲೇಡಿಗೆ ನೀಡಲಾಗುತ್ತದೆ ಎಂದು ಹೇಳಿದರು.


ಮಗುವಿಗೆ ಜನ್ಮ ನೀಡುವುದು ಒಂದು ಮಹಿಳೆಗೆ ತಮ್ಮ ಬದುಕಿನಲ್ಲೇ ಅತ್ಯಂತ ಸುಂದರ ಹಾಗೂ ಅದ್ಬುತ ಕ್ಷಣಗಳು, ಈ ಸನ್ನಿವೇಶವನ್ನು ಜೀವನಪೂರ್ತಿ ಇಟ್ಟುಕೊಳ್ಳುವ ನೆನಪನ್ನು ಓವಂ ಆಸ್ಪತ್ರೆ ನೀಡುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ವೈದ್ಯರಾದ ಡಾ.ಹರಿಣಿ ಪಿ.ಶೆಟ್ಟಿ, ಡಾ. ಮರ್ಲಿನ್ ಜೆ ಕಿಶೋರ್, ಡಾ. ಚೈತ್ರ ಎಸ್.ಕೆ, ಡಾ.ಮುರುಳಿ ಮೋಹನ್, ಡಾ. ಲಿಂಗರಾಜ್ ಮೂಲಗೆ, ಡಾ. ಅಭಿಷೇಕ್ ಎಸ್ ಮತ್ತಿತರರಿದ್ದರು .