Home ಜಿಲ್ಲೆ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

ಧಾರವಾಡ, ಜೂ.೧೦: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ವತಿಯಿಂದ ಜೂನ್ ೬ ರಂದು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಧಾರವಾಡದ ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಅವರು ಮಾತನಾಡಿ, ವಿಭಾಗದ ಒಂದು ಜಿಲ್ಲೆಯಲ್ಲಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ, ಅವರ ಸಾಧನೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ‘ಸಾಧಕರೊಂದಿಗೆ ಸಂವಾದ’ ಎಂಬ ನೂತನ ಯೋಜನೆಯೊಂದನ್ನು ಪ್ರಸಕ್ತ ಸಾಲಿನಲ್ಲಿ ಜಾರಿಯಲ್ಲಿ ತಂದಿದೆ. ಅದರಂತೆ ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊAಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಮಹಾವೀರ ರಾಯಪ್ಪ ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ. ಎಂ.ಆರ್.ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಸರ್ಕಾರ ಗುರುತಿಸಿದೆ ಎಂದು ಹೇಳಿದರು.


ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ ಅವರು ಮಾತನಾಡಿ, ತಮ್ಮ ಬಾಲ್ಯ ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ ಸತ್ಯದ ಹಾದಿಯಲ್ಲಿ ನಡೆದರೆ ನಮ್ಮ ಜೀವನ ಸುಗಮವಾಗಿರುತ್ತದೆ. ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊAಡರು.


ಎಷ್ಟು ಕಷ್ಟಗಳನ್ನು ಅನುಭವಿಸುತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಿಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನನ್ನ ಗುರುಗಳಾದ ಎಸ್.ಕೆ.ಭಾವನ್ನವರ ಅವರ ಮಾರ್ಗದರ್ಶನದಲ್ಲಿ ನಾನು ಚಿತ್ರಕಲೆಯನ್ನೇ ಆಯ್ಕೆಮಾಡಿಕೊಂಡು ಅದರಲ್ಲೇ ಮುಂದುವರೆದಿದ್ದೇನೆ. ಅನುಭವವೇ ನಮ್ಮ ಜೀವನಕ್ಕೆ ದಾರಿದೀಪವಾಗಬೇಕೆಂದರು.
ಪ್ರಶ್ನೋತ್ತರಗಳಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಎ.ಐ.ದಂತಹ ಬದಲಾವಣೆಗಳಿಂದುAಟಾದ ಗೊಂದಲ, ಚಿತ್ರಕಲಾ ಶಿಕ್ಷಕರ ನೇಮಕಾತಿಯಿಂದ ಕಲಾ ಶಾಲೆಗಳು ಬಂದಾಗುತ್ತಿರುವುದು, ವಿದ್ಯಾರ್ಥಿಗಳಿಂದು ಕಲಾಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿ ಕೊಳ್ಳದೇ ಇರುವುದು ಇಂಥ ಅನೇಕ ವಿಷಯಗಳಿಗೆ ತಮ್ಮ ಅನುಭವದ ಮೂಲಕ ಕಲಾಕ್ಷೇತ್ರ ಉಳಿಸಿ ಬೆಳೆಸುವ ಕುರಿತು ತಿಳಿಸಿದರು.

ಡಿ.ವಿ.ಹಾಲಭಾವಿ ರಾಷ್ಟಿçÃಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ.ಬಿ.ಎಲ್.ಚೌಹಾನ, ಪಿ.ಎಸ್.ಕಡೇಮನಿ, ಡಾ.ಎಸ್.ಸಿ.ಪಾಟೀಲ, ಎಮ್.ಎಸ್.ಚೌದರಿ, ಡಿ.ಎಂ.ಬಡಿಗೇರ, ಬಿ.ಐ.ಈಳಗೇರ ಅವರು ಪಾಲ್ಗೊಂಡು ಅನೇಕ ವಿಷಯಗಳ ಕುರಿತು ಸಂವಾದ ನಡೆಸಿದರು.


ಇದೇ ಸಂದರ್ಭದಲ್ಲಿ ಎಂ.ಆರ್.ಬಾಳಿಕಾಯಿ ಅವರು ಕುರಿತು ನಿರ್ಮಾಣಗೊಂಡ ಸಾಕ್ಷö್ಯಚಿತ್ರವನ್ನು ಪ್ರದರ್ಶಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಸುರೇಶ ಹಾಲಭಾವಿ, ಡಾ.ಶಶಿಧರ ನರೇಂದ್ರ, ಡಾ.ಬಸವರಾಜ ಕುರಿಯವರ, ಎನ್.ಆರ್.ನಾಯ್ಕರ್, ಡಾ.ರಾಯಪ್ಪ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್.ಬಿ.ಕಂಕಣವಾಡಿ ಸೇರಿದಂತೆ ಬಾಳಿಕಾಯಿಯವರ ಶಿಷ್ಯವರ್ಗ, ಕುಟುಂಬ ವರ್ಗ ಹಾಗೂ ರಂಗಾಯಣದ ರೆಪರ್ಟಿ ಕಲಾವಿದರು ಉಪಸ್ಥಿತರಿದ್ದರು.