Home ಮುಖಪುಟ ಸುದ್ದಿ ಒಂದೇ ಏಟಿಗೆ ಇರಾನ್ ನಾಶ:ಟ್ರಂಪ್ ಗುಡುಗು

ಒಂದೇ ಏಟಿಗೆ ಇರಾನ್ ನಾಶ:ಟ್ರಂಪ್ ಗುಡುಗು

ವಾಷಿಂಗ್ಟನ್, ಜು.೫- ಅಮೆರಿಕ ಮನಸ್ಸು ಮಾಡಿದರೆ ಒಂದೇ ಹೊಡೆತದಲ್ಲಿ ಇಡೀ ಇರಾನ್ ನಾಯಕತ್ವವನ್ನು ನಿರ್ಮೂಲನೆ ಮಾಡುವ ಶಕ್ತಿ ನಮಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗುಡುಗಿದ್ದಾರೆ.

ಅಮೆರಿಕಕ್ಕೆ ಇರುವ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಬದಲಾಗಿ, ಇರಾನ್ ಜೊತೆಗಿನ ಪರಮಾಣು ಒಪ್ಪಂದ ಮಾತುಕತೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ನೆರೆದಿದ್ದ ಇರಾನ್ ನಾಯಕತ್ವವನ್ನು ಅಮೆರಿಕ ಹೊಡೆಯಬಹುದಿತ್ತು, ಆದರೆ ಹಾಗೆ ಮಾಡುವುದಿಲ್ಲ. ಅಂತಹ ಕ್ರಮವನ್ನು ತಪ್ಪಿಸುವ ಮೂಲಕ ಇರಾನ್ ಜೊತೆಗಿನ ಪರಮಾಣು ಮಾತುಕತೆಗೆ ಒತ್ತು ನೀಡಿದ್ದೇವೆ ಎಂದಿದ್ಧಾರೆ

ಫೆಬ್ರವರಿ ೨೮ ರಂದು ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ದಿವಂಗತ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಾರಪೂರ್ತಿ ನಡೆದ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಇರಾನಿನ ಹಿರಿಯ ವ್ಯಕ್ತಿಗಳ ಸಭೆ ಉದ್ದೇಶಿಸಿ ಅಮೇರಿಕ ಬಯಸಿದರೆ ಕೇವಲ “ಒಂದು ಹೊಡೆತ” ದಿಂದ ಇರಾನ್‌ನ ಉಳಿದ ನಾಯಕತ್ವವನ್ನು ನಿರ್ಮೂಲನೆ ಮಾಡಬಹುದು ಎಂದಿದ್ಧಾರೆ.


ಇರಾನ್ ಜೊತೆ ಮಾತುಕತೆ ಮುಂದುವರಿಯಬೇಕೆಂದು ಅಮೆರಿಕ ಬಯಸುತ್ತಿದೆ. ಹೀಗಾಗಿ ಅಂತಹ ಹೆಜ್ಜೆ ಇಡಲು ಸಿದ್ಧವಾಗಿಲ್ಲ “ಅವರೆಲ್ಲರೂ ಇದ್ದಾರೆ. ಒಂದು ಹೊಡೆತದಲ್ಲಿ ಎಲ್ಲರನ್ನು ನಾವು ಮುಗಿಸಬಹುದಿತ್ತು, ಆದರೆ ನಮಗೆ ಮಾತುಕತೆ ಮುಖ್ಯ ಎಂದಿದ್ದಾರೆ.


ಕೆಲವು ಇರಾನಿಯನ್ನರು ಅಂತ್ಯಕ್ರಿಯೆಯಲ್ಲಿ ಅಳುತ್ತಿರುವುದನ್ನು ನೋಡಿ ತಮಗೆ ಆಶ್ಚರ್ಯವಾಯಿತು ಎಂದು ಹೇಳಿದ ಅವರು ಜನರು ಆಯಾತೊಲ್ಲ ಅಲಿ ಖಮೇನಿ ಅವರನ್ನು ದ್ವೇಷಿಸುತ್ತಿದ್ದಾರೆಂದು ಅವರು ಭಾವಿಸಿದ್ದೆ ಎಂದಿದ್ದಾರೆ.


ಅರ್ಮೇನಿಯಾದಲ್ಲಿರುವ ಇರಾನ್‌ನ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಅಮೇರಿಕಾ ಅಧ್ಯಕ್ಷರ ಹೇಳಿಕೆಗೆ ತಿರಿಗೇಟು ನೀಡಿದ್ದು “ನಿಮಗೆ ನಾಗರಿಕತೆ, ಇತಿಹಾಸ ಅಥವಾ ಗೌರವವಿಲ್ಲದ ಕಾರಣ ನಿಮಗೆ ಇವು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

‘ಜುಲೈ ನಾಲ್ಕನೇ’ ಹಬ್ಬಕ್ಕೆ ಮುಂಚಿತವಾಗಿ, ಅಮೆರಿಕ ಅಧ್ಯಕ್ಷರು ಇರಾನ್ ಅನ್ನು ಟೀಕಿಸುತ್ತಾ, “ನಾವು ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡಿದ್ದೇವೆ. ಅವರು ನೆಲೆಗೊಳ್ಳಲು ಸಾಯುತ್ತಿದ್ದಾರೆ. ನೆಲೆಗೊಳ್ಳಲು ತುಂಬಾ ಕೆಟ್ಟದಾಗಿ ಬಯಸುತ್ತಾರೆ ಖಮೇನಿ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಒಂದು ವಾರ ಕದನ ವಿರಾಮ ಮುಂದೂಡಿದ್ದಾಗಿ ಈ ಹಿಂದೆ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಅಮೆರಿಕ ಮನಸ್ಸು ಮಾಡಿದರೆ ಇರಾನ್ ನಾಯಕತ್ವ. ಉಡೀಸ್ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

  • ಇರಾನ್ ಗೆ ಅಮೆರಿಕ ಅಧ್ಯಕ್ಷರ ನೇರ ಎಚ್ಚರಿಕೆ
  • ಒಂದೇ ಹೊಡೆತದಲ್ಲಿ ಮುಗಿಸುವ ಬೆದರಿಕೆ
  • ಆಯಾತೊಲ್ಲ ಖಮೇನಿ ಅಂತ್ಯಕ್ರಿಯೆ ಹಿನ್ನಲೆಯ ಒಂದು ವಾರ ಕದನ ವಿರಾಮ ಘೋಷಣೆ
  • ಇರಾನ್ ಜೊತೆ ಪರಮಾಣ ಮಾತುಕತರಗೆ ಸಿದ್ದ
  • ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಆಯಾತೊಲ್ಲ ಆಲಿ ಖಮೇನಿ ಹತ್ಯೆ
  • ಪೆಬ್ರವರಿ ೨೮. ಖಮೇನಿ ಹತ್ಯೆ, ವಾರಗಳ ಕಾಲ ಅಂತ್ಯಕ್ರಿಯೆ ಪ್ರಕ್ರಿಯೆ

ಅಮೆರಿಕ, ಇಸ್ರೇಲ್‌ಗೆ ಇರಾನ್ ತಿರುಗೇಟು
ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯ ಕಮಾಂಡರ್ ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ದಿವಂಗತ ನಾಯಕರ ಹಾದಿಯಲ್ಲೇ ಇರಾನ್ ಸಶಸ್ತ್ರ ಪಡೆಗಳು ಮುನ್ನಡೆಯಲಿವೆ ಎಂದು ಘೋಷಿಸಿರುವ ಅವರು, ಶೀಘ್ರದಲ್ಲೇ ತೀವ್ರ ಪ್ರತಿಕಾರ” ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಇರಾನ್ ಸರ್ಕಾರಿ ಮಾಧ್ಯಮಗಳಿಗೆ ಸಂದೇಶ ಬಿಡುಗಡೆ ಮಾಡಿದ ರಿಯರ್ ಅಡ್ಮಿರಲ್ ಅಲಿ ಒಜ್ಮಾಯಿ, ಆಯತೊಲ್ಲಾ ಖಮೇನಿ ಅವರ ಪರಂಪರೆಯನ್ನು ಎತ್ತಿಹಿಡಿಯಲು ತಾವು ಮತ್ತು ಗಿಲಾಯಿ ಹಾಗೂ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ. “ಭಯೋತ್ಪಾದಕ ಅಮೆರಿಕ ಮತ್ತು ಕಾನೂನುಬಾಹಿರ ಜಿಯೋನಿಸ್ಟ್ (ಇಸ್ರೇಲ್) ಆಡಳಿತದ ವಿರುದ್ಧ ದೈವಿಕ ಪ್ರತಿಕಾರವು ದೂರವಿಲ್ಲ. ಘನತೆ ಮತ್ತು ಶಕ್ತಿಯ ಶಿಖರದಲ್ಲಿ ಸತ್ಯದ ಧ್ವಜವು ಸದಾ ಹಾರಾಡಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕಳೆದ ಫೆಬ್ರವರಿ ೨೮, ೨೦೨೬ ರಂದು ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಈ ಘಟನೆಯು ಉಭಯ ದೇಶಗಳ ನಡುವೆ ತಿಂಗಳುಗಳ ಕಾಲ ನಡೆದ ಸುದೀರ್ಘ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಈ ದಾಳಿಯಲ್ಲಿ ಖಮೇನಿ ಅವರೊಂದಿಗೆ ಅವರ ಹಲವು ಸಂಬಂಧಿಕರು ಸಹ ಪ್ರಾಣ ಕಳೆದುಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಐಆರ್‌ಜಿಸಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಹತರಾದ ನಂತರ ಅಲಿ ಒಜ್ಮಾಯಿ ಅವರನ್ನು ಹೊಸ ಕಮಾಂಡರ್ ಆಗಿ ನೇಮಿಸಲಾಗಿತ್ತು.


ತೆಹ್ರಾನ್‌ನ ಇಮಾಮ್ ಖೊಮೇನಿ ಮುಸಲ್ಲಾ ಮಸೀದಿ ಸಂಕೀರ್ಣದಲ್ಲಿ ಲಕ್ಷಾಂತರ ಶೋಕತಪ್ತರು ಕಪ್ಪು ವಸ್ತ್ರ ಧರಿಸಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದಾರೆ. ಇರಾನ್ ಧ್ವಜಗಳು ಹಾಗೂ ’ಯಾ ಲಿಥಾರತ್ ಅಲ್-ಹುಸೇನ್’ (ಹುಸೇನ್ ಅವರ ರಕ್ತದ ಪ್ರತಿಕಾರ) ಎಂದು ಬರೆದಿರುವ ಧ್ವಜಗಳನ್ನು ಕೈಯಲ್ಲಿ ಹಿಡಿದಿರುವ ಜನರು ಸೇಡಿನ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸಾರ್ವಜನಿಕರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದು, “ನಮ್ಮ ನಾಯಕನ ರಕ್ತಕ್ಕೆ ಪ್ರತಿಕಾರ ತೀರಿಸಿಕೊಳ್ಳುವವರೆಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆಮ್ಮದಿಯಿಂದ ನಿದ್ರಿಸಲು ಬಿಡುವುದಿಲ್ಲ” ಎಂದು ಶೋಕತಪ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಸೀದಿಯ ಆವರಣದ ಗೋಡೆಗಳ ಮೇಲೆ “ಸೈತಾನನೊಂದಿಗೆ ಯಾವುದೇ ಮಾತುಕತೆ ಇಲ್ಲ” ಎಂಬ ಅಮೆರಿಕ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.


ಇರಾನ್ ಮಾಧ್ಯಮಗಳ ಪ್ರಕಾರ, ಜುಲೈ ೬ ರಂದು ತೆಹ್ರಾನ್‌ನಲ್ಲಿ ಅಧಿಕೃತ ಅಂತ್ಯಕ್ರಿಯೆ ನೆರವೇರಲಿದ್ದು, ಜುಲೈ ೭ ರಂದು ಖೊಮ್ ನಗರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇರಾಕ್‌ನ ಧಾರ್ಮಿಕ ಮುಖಂಡರು, ಬುಡಕಟ್ಟು ನಾಯಕರು ಮತ್ತು ರಾಜಕೀಯ ಗಣ್ಯರ ವಿನಂತಿಯ ಮೇರೆಗೆ ಜುಲೈ ೮ ರಂದು ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ಶೋಕಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕೂ ಮುನ್ನ ನಡೆದ ಗೌರವ ಸಲ್ಲಿಕೆ ಸಭೆಯಲ್ಲಿ ವಿಶ್ವದ ಹಲವು ದೇಶಗಳ ವಿದೇಶಿ ನಿಯೋಗಗಳು ಭಾಗವಹಿಸಿದ್ದವು ಎಂದು ವರದಿಯಾಗಿದೆ.