Home ಸಿನೆಮಾ ‘ವೀರ ರಂಗ ಸಂಭ್ರಮ K5’ಗೆ ಚಾಲನೆ

‘ವೀರ ರಂಗ ಸಂಭ್ರಮ K5’ಗೆ ಚಾಲನೆ

‘ಮಾಯಾದ ಮನದ ಭಾರ’ ಗೀತೆ ಬಿಡುಗಡೆ

ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಸುಷ್ಮಾ ವೀರ್ ಅವರ ಸಾರಥ್ಯದಲ್ಲಿ ‘ವೀರ ರಂಗ ಸಂಭ್ರಮ K5’ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಜನಪ್ರಿಯ ರಂಗಗೀತೆ ‘ಮಾಯಾದ ಮನದ ಭಾರ’ ಹೊಸ ರೂಪದಲ್ಲಿ ಬಿಡುಗಡೆಯಾಯಿತು.

ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದರಾಜು ಹಾಗೂ ಎಸ್.ಎ. ಗೋವಿಂದರಾಜು ಗೀತೆಯನ್ನು ಅನಾವರಣಗೊಳಿಸಿದರು. ನಿರ್ದೇಶಕ ಪಿ. ಶೇಷಾದ್ರಿ, ನಟ ಸುಚೇಂದ್ರ ಪ್ರಸಾದ್, ಸುಂದರರಾಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಗೀತೆಗೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನ ಬಳಕೆ ಮಾಡಲಾಗಿದೆ ಎಂದು ಸುಷ್ಮಾ ವೀರ್ ತಿಳಿಸಿದರು. ಕನ್ನಡ ರಂಗಗೀತೆಗಳನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ‘ವೀರ ರಂಗ ಸಂಭ್ರಮ K5’ ಆರಂಭಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಕಾರಂತ, ಕಾರ್ನಾಡ್ ಹಾಗೂ ಕಂಬಾರರ ಕೃತಿಗಳನ್ನು ಒಳಗೊಂಡ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸುಷ್ಮಾ ವೀರ್ ತಮ್ಮದೇ ಧ್ವನಿಯಲ್ಲಿ ಗೀತೆ ಹಾಡಿ ಗಮನ ಸೆಳೆದರು. ಅವರ ಗಾಯನವನ್ನು ಗಣ್ಯರು ಹಾಗೂ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.