
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಾರಬ್ ನಗರ ವಾರ್ಡ್ ೦೩ ಕಾಂಗ್ರೆಸ್ ಮಹಿಳಾ ಮುಖಂಡರಾದ ಶಬೀನಾ ತಾಜ್ ರವರು ಹಾಗೂ ಬೆಂಗಳೂರು ದಕ್ಷಿಣ ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಶಬ್ಬೀರ್ ರವರ ನೇತೃತ್ವದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ ಗುರಪ್ಪನಾಯ್ಡು ರವರ ಹಾಗೂ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಓ. ಮಂಜುನಾಥ್ ರವರ ಸಹಕಾರದೊಂದಿಗೆ ಸುಮಾರು ೧೦೦೦ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ, ಹರೀಶ್ ಜಲೀಲ್ ಅಹ್ಮದ್. ಚಾಂದ್ ಪಾಷಾ. ಇಮ್ರಾನ್ ಪಾಷಾ. ಫೈರೋಜ್ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದಾರೆ.





























