ಕಲಬುರಗಿ: ನಗರದ ಕೋರ್ಟ್ ರಸ್ತೆಯ ಬಸವ ಮಂಟಪದಲ್ಲಿ ಇಂದು ಹಮ್ಮಿಕೊಂಡಿದ್ದ ಗುರುಬಸವ ಸೇವಾ ಪ್ರತಿಷ್ಠಾನದ ಐದನೇ ವಾರ್ಷಿಕೋತ್ಸವ ಹಾಗೂ ಲಿಂ.ಶರಣ ಬಸವರಾಜ ನಾಗೂರ ಅವರ ಆರನೇಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಬೀದರ್‍ನ ಶರಣ ಸಾಹಿತಿ ಪ್ರಕಾಶ ಗಂದಿಗುಡೆ ಉದ್ಘಾಟಿಸಿದರು. ಬಸವಕಲ್ಯಾಣ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯ ಬಸವಪ್ರಭು ಮಹಾಸ್ವಾಮಿಗಳು, ಜಯಶ್ರೀ ಚಟ್ನಳ್ಳಿ, ಬಾಬುರಾವ ಶೇರಿಕಾರ, ಆರ್.ಜಿ.ಶೆಟಗಾರ, ಬಸವರಾಜ ಧೂಳಾಗುಂಡಿ, ಕುಮಾರಿ ನಿಷ್ಪತ್ತಿ ಬಸವರಾಜ ಪರಶೆಟ್ಟಿ, ಶರಣಬಸಪ್ಪ ನಾಗೂರ, ಮಾತಾಜಿ ಎಂ.ಗೋಳಾ, ಬಸವರಾಜ ಪರಶೆಟ್ಟಿ, ರವೀಂದ್ರ ಶಾಬಾದಿ ಇದ್ದರು.