Home ಆರೋಗ್ಯ ಚಕೋತ ಹಣ್ಣಿನ ಉಪಯೋಗ

ಚಕೋತ ಹಣ್ಣಿನ ಉಪಯೋಗ

ಹುಳಿ ಸಿಹಿಯನ್ನು ಹೊಂದಿರುವ ಚಕೋತಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನನಿತ್ಯ ಚಕೋತ ತಿನ್ನುವುದರಿಂದಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ವಸಡಿನಲ್ಲಿ ರಕ್ತ ಬರೋದು, ಬಾಯಿ ದುರ್ವಾಸನೆಯಿಂದ ಕೂಡಿದ್ದರೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರಿಂದ ದೂರ ಇರೋಕೆ ಪ್ರತಿನಿತ್ಯ ಚಕೋತ ತಿಂದರೆ ಆರೋಗ್ಯದ ದೃಷ್ಟಿಯಿಂದಒಳ್ಳೆಯದು.ರಕ್ತದಲ್ಲಿ ಕೊಬ್ಬಿನಂಶ ಸೇರಿ ಹೃದಯಕ್ಕೆ ರಕ್ತಸಂಚಾರ ಕಡಿಮೆ ಆಗುತ್ತಿದ್ದರೆ ಚಕೋತದಲ್ಲಿರುವ ಪೆಕ್ಟಿನ್ ಎಂಬ

ಅಂಶವು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಬುರುವುದು ಸಾಮಾನ್ಯ. ಇವೆಲ್ಲವುಗಳಿಗೆ ಪರಿಹಾರವೆಂದರೆ ವಿಟಮಿನ್ ಸಿ. ಚಕೋತ ಹಣ್ಣು ಅಥವಾ ರಸದ ರೂಪದಲ್ಲಿ ದೇಹಕ್ಕೆ ಸೇರಿವುದರಿಂದ ವಿಟಮಿಸ್ ಸಿ ಸಿಗುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ನಾರಿನಂಶದ ಸೇವನೆ ಅಗತ್ಯ ಚಕೋತ ತಿಂದ್ರೆ ಸಾಕಷ್ಟು ನಾರಿನಂಶ ದೇಹಕ್ಕೆ ಸಿಗುವುದರಿಂದನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು. ನಿಯಮಿತವಾಗಿ ಚಕೋತ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.