
ನ್ಯೂಯಾರ್ಕ್, ಜು.೪– ಅಮೆರಿಕದ ಪಾಪ್ ಸೂಪರ್ಸ್ಟಾರ್ ಟೇಲರ್ ಸ್ವಿಫ್ಟ್ ಮತ್ತು ಅಮೇರಿಕನ್ ಫುಟ್ಬಾಲ್ ಆಟಗಾರ ಟ್ರಾವಿಸ್ ಕೆಲ್ಸೆ ಆಪ್ತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಹೊಸ ಜೀವನ ಆರಂಭಿಸಿದ್ಧಾರೆ
ಮ್ಯಾಡಿಸನ್ ಸ್ಕೇರ್ ಗಾರ್ಡನ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಗೀತ ಲೋಕದ ದಿಗ್ಗಜರು, ಹಾಲಿವುಡ್ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಆಹ್ವಾನಿತ ಗಣ್ಯರು ಭಾಗಿಯಾಗಿದ್ದರು.
.
ಜೊತೆಗೆ ಹಾಲಿವುಡ್ನ ಖ್ಯಾತ ನಟರಾದ ಹಗ್ ಗ್ರಾಂಟ್ ಮತ್ತು ಜೇಸನ್ ಸುಡೆಕಿಸ್, ಗಾಯಕ ಬೆನ್ಸನ್ ಬೂನ್ ಮತ್ತು ಮಾಡೆಲ್ ಗಿಗಿ ಹಡಿದ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಾರಾ ಜೋಡಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಮದುವೆ ಅಂದ ಮತ್ತಷ್ಟು ಹೆಚ್ಚಿಸಿದ್ಧಾರೆ
ಮ್ಯಾಡಿಸನ್ ಸ್ಕೇರ್ ಗಾರ್ಡನ್ ಹೊರಗೆ ನಿನ್ನೆಯಿಂದಲೇ ಅಸಂಖ್ಯಾತ ಅಭಿಮಾನಿಗಳು ತಾರಾ ಜೋಡಿಯ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು ಕೆಲವರು ಸ್ವಿಫ್ಟ್ ಟ್ಯೂನ್ಗಳನ್ನು ಹಾಡಿದರು ಮತ್ತು ಸಂಗೀತ ಕಛೇರಿ ನಡೆಸಿ ಗಮನ ಸೆಳೆದಿದ್ದರು
ಆಪ್ತರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಚಿತ್ರತಾರೆಯರು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು ಸೇರಿದಂತೆ ೧೦೦ ಮಂದಿ ಭಾಗಿಯಾಗಿದ್ದರು ಎಂದು ಆಪ್ತಮೂಲಗಳು ತಿಳಿಸಿವೆ
ಮಿಡ್ಟೌನ್ ಮ್ಯಾನ್ಹ್ಯಾಟನ್ನಲ್ಲಿನ ಬೀದಿಗಳು ಸಂಚಾರ ದಟ್ಟಣೆಗೆ ಕಾರಣವಾಗಲಿದೆ ಎನ್ನುವ ಮುನ್ನಚ್ಚರಿಕೆ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಅಮೇರಿಕಾದ ಪಾಪ್ ಸೂಪರ್ಸ್ಟಾರ್ ಟೇಲರ್ ಸ್ವಿಫ್ಟ್ ಮತ್ತು ಅಮೇರಿಕನ್ ಫುಟ್ಬಾಲ್ ಆಟಗಾರ ಟ್ರಾವಿಸ್ ಕೆಲ್ಸೆ ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಬಹುದಿನಗಳಿಂದ ನಡೆಯುತ್ತಿದ್ದ ಗುಸು ಗುಸುಗೆ ತೆರೆ ಎಳೆದಿದ್ದಾರೆ.
ಅಮೆರಿಕಾದ ಪಾಪ್ ಸೂಪರ್ಸ್ಟಾರ್ ಟೇಲರ್ ಸ್ವಿಫ್ಟ್ ಮತ್ತು ಅಮೇರಿಕನ್ ಫುಟ್ಬಾಲ್ ಆಟಗಾರ ಟ್ರಾವಿಸ್ ಕೆಲ್ಸೆ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಧಿರಿಸಿನಲ್ಲಿ ಕಂಗೊಳಿಸಿದ್ಧಾರೆ. ಡಿಯರ್ ಮಹಿಳಾ, ಪುರುಷರ ಮತ್ತು ಹಾಟ್ ಕೌಚರ್ ಕಲೆಕ್ಷನ್ಗಳ ಕ್ರಿಯೇಟಿವ್ ಡೈರೆಕ್ಟರ್ ಜೊನಾಥನ್ ಆಂಡರ್ಸನ್ ವಿನ್ಯಾಸಗೊಳಿಸಿದ ಸ್ವಿಫ್ಟ್ ಮತ್ತು ಕೆಲ್ಸೆ ವಿಶೇಷ ಸಂಗ್ರಹ ಧರಿಸಿದ್ದರು
ವಿಶ್ವ-ಪ್ರಸಿದ್ಧ ಸೆಲೆಬ್ರಿಟಿಗಾಗಿ ವಿನ್ಯಾಸಕರ ಮೊದಲ ಕೌಚರ್ ಮದುವೆಯ ಡ್ರೆಸ್ ಆಗಿದೆ” ಎಂದು ಪೈನ್ ಹೇಳಿಕೆಯಲ್ಲಿ ತಿಳಿಸಿದ್ದು ಅವರ ಬೂಟುಗಳನ್ನು ಕ್ರಿಶ್ಚಿಯನ್ ಲೌಬೌಟಿನ್ ಅವರು ಕಸ್ಟಮ್ ಮಾಡಿದ್ದಾರೆ ಮತ್ತು ವಧು ಕಾರ್ಟಿಯರ್ ಆಭರಣಗಳನ್ನು ಧರಿಸಿದ್ದರು ಎಂದು ಹೇಳಲಾಗಿದೆ
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಅನ್ನು ಗುಲಾಬಿ ಬಣ್ಣದಲ್ಲಿ ಅಲಂಕಿಸಲಾಗಿತ್ತು. ಇಡೀ ನ್ಯೂಯಾರ್ಕ್ ನಗರ ಅಮೇರಿಕಾದ ಪಾಪ್ ಸೂಪರ್ಸ್ಟಾರ್ ಟೇಲರ್ ಸ್ವಿಫ್ಟ್ ಮತ್ತು ಅಮೇರಿಕನ್ ಫುಟ್ಬಾಲ್ ಆಟಗಾರ ಟ್ರಾವಿಸ್ ಕೆಲ್ಸೆ ಮದುವೆಗಾಗಿ ನವವಧುವಿನಂತೆ ಕಂಗೊಳಿಸುತ್ತಿತ್ತು


























