ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ನೂತನವಾಗಿ ಆರಂಭವಾದ ಎಲ್‌ಕೆಜಿ-ಯುಕೆಜಿ ತರಗತಿಯ ೪೦ ಮಕ್ಕಳಿಗೆ ಸಮಯಾಚಾರ ಫೌಂಡೇಶನ್ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಬುಕ್ ಮತ್ತು ಪೆನ್ಸಿಲ್ ನೀಡಲಾಯಿತು. ಮುಖ್ಯ ಶಿಕ್ಷಕ ಅಶೋಕ್ ಬೂದಿಹಾಳ, ಫೌಂಡೇಶನ್ ಉಪಾಧ್ಯಕ್ಷ ಚಿದಾನಂದ ಕಮ್ಮಾರ, ಆರಾಧನಾ ಸಮಿತಿ ಸದಸ್ಯ ರವಿ ದಾನಮ್ಮನವರ, ಚಂದ್ರು ಹಾದಿಮನಿ, ಬಾಬಾಜಾನ ಸುಂಕದ ಮತ್ತು ಶಿಕ್ಷಕಿಯರಾದ ರೇಖಾ ದಾನಮ್ಮನವರ, ಸವಿತಾ ಪಾಟೀಲ್ ಮತ್ತಿತರರಿದ್ದರು.