
ಕಲಬುರಗಿ,ಅ.9: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನೆ ವಿಭಾಗದ ವತಿಯಿಂದ ಅರ್ಥಶಾಸ್ತ್ರ ಅಧ್ಯಾಪಕರಿಗಾಗಿ ‘ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ’ ಕುರಿತು ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ನವೆಂಬರ್ 16ರಿಂದ 18ರವರೆಗೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ವಿ.ವಿ.ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಇಂದು ಕಾರ್ಯಕ್ರಮದ ಪೆÇೀಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ ಅವರು ಅರ್ಥಶಾಸ್ತ್ರ ಅಧ್ಯಾಪಕರು ತಮ್ಮ ವಿಶ್ಲೇಷಣಾತ್ಮಕ ಮತ್ತು ಸಂಶೋಧನಾ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಈ ಕಾರ್ಯಕ್ರಮವು ಉತ್ತಮ ಅವಕಾಶವಾಗಿದೆ. ದೇಶದಾದ್ಯಂತ, ವಿಶೇಷವಾಗಿ ಕರ್ನಾಟಕದ ಅರ್ಥಶಾಸ್ತ್ರ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆಯಲ್ಲಿ ವಿಶೇಷ ತರಬೇತಿ ನೀಡುವ ಮೂಲಕ ಅರ್ಥಶಾಸ್ತ್ರ ಅಧ್ಯಾಪಕರ ವಿಶ್ಲೇಷಣಾತ್ಮಕ ಸಾಮಥ್ರ್ಯ ಹಾಗೂ ಸಂಶೋಧನಾ ಕೌಶಲಗಳನ್ನು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್, ವ್ಯವಹಾರ ಅಧ್ಯಯನ ವಿಭಾಗದ ಡೀನ್ ಪೆÇ್ರ. ಪಾಂಡುರಂಗ ವಿ. ಪತ್ತಿ, ಐಕ್ಯೂಎಸಿ ನಿರ್ದೇಶಕರು ಹಾಗೂ ಇಂಜಿನಿಯರಿಂಗ್ ವಿಭಾಗದ ಡೀನ್ ಪೆÇ್ರ. ಎಂ. ಅಮರೇಂದ್ರ ಮತ್ಸಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುಮಾ ಸ್ಕಾರಿಯಾ ಮತ್ತು ಪೆÇ್ರ. ಎಂ. ವಿ. ಎನ್. ಅಂಬಿಕಾ ಪ್ರಸಾದ್ ಸೇರಿದಂತೆ ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ನಿರ್ದೇಶಕ ಡಾ. ಮಲ್ಲೇಶ್ ಉಮ್ಮಲ್ಲಾ ಮತ್ತು ಸಹ ಪ್ರಾಧ್ಯಾಪಕ, ಕಾರ್ಯಕ್ರಮದ ಸಹ-ನಿರ್ದೇಶಕ ಹಾಗೂ ಸಂಯೋಜಕರಾದ ಡಾ. ಎಸ್. ಲಿಂಗಮೂರ್ತಿ, ವಿಭಾಗದ ಪ್ರಾಧ್ಯಾಪಕರಾದ ಎಂ.ಡಿ. ಮೊಹ್ಸಿನ್ ಖಾನ್ ಮತ್ತು ಡಾ. ಅನುಶ್ರೀ ಎಸ್. ಪಣಿಕ್ಕಸ್ಸೆರಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ನಿರ್ದೇಶಕ ಡಾ. ಮಲ್ಲೇಶ್ ಉಮ್ಮಲ್ಲಾ ಅವರನ್ನು ಸಂಪರ್ಕಿಸಬಹುದಾಗಿದೆ( ಮೊಬೈಲ್: 9182104731)























