
ಕೊಲ್ಹಾರ: ಜು.10:ಪಟ್ಟಣದ ಗುರುಮಠ ಹಿರೇಪಟ್ಟದೇವರ ಶೀಲವಂತಹಿರೇಮಠದಲ್ಲಿ “ಬರಗಾಲ ನಿವಾರಣೆ ” ವಿಶ್ವ ಶಾಂತಿ ನೆಲಿಸಿ-ನಾಡ ಸಮೃದ್ಧಿಗಾಗಿ ಸಂಕಲ್ಪಿಸಿ ಶ್ರೀ ಶ್ರೀ ಘಣ ಮಹಿಮ ಪೂರ್ಣಜ್ಞ ಧರ್ಮರತ್ನ ಶಿವಾಚಾರ್ಯ ಭೂಷಣ ಡಾ.ಕೈಲಾಸನಾಥ ಪೂಜ್ಯರು ಅಧಿಕ ಜೇಷ್ಠ ಮಾಸದಿಂದ ನಡೆಸಿಕೊಂಡು ಬಂದ ನಿರಂತರ ಕೋಟಿ ಜಪಾನುಷ್ಠಾಣ ಇಷ್ಠಲಿಂಗ ಪೂಜಾ ಕಾರ್ಯಕ್ರಮ ಹಾಗೂ ಚಾತುರ್ಮಾಸ ಜಲದೇವತಾ ಕುಂಭ ಪೂಜಾ ಹಮ್ಮಿಕೊಂಡು ದಿವ್ಯ ಸಾನಿಧ್ಯ ವಹಿಸಿ ಉಪದೇಶಾಮ್ರತ ನೀಡಿದರು, ದೈವಿ ಶಕ್ತಿಯ ನಂಬಿದವರಿಗೆ ಭಗವಂತನ ಆಸಿರ್ವಾದ ಸದಾ ಸಿಗುವದು, ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ನಿರಂತರ ಕೋಟಿ ಜಪಾನುಷ್ಠಾಣ ಇಷ್ಠಲಿಂಗ ಪೂಜೆಯಲ್ಲಿ ದರ್ಶನ ಪಡೆದ ಸಕಲರಿಗೂ ದಯಾಮಯನಾದ ಪರಶಿವನ ಅನುಗ್ರಹವಾಗಿ ಶಕ್ತಿ ಮಾತೆ ಪಾರ್ವತಿ ದೇವಿಯ ಕೃಪೆ ಯಾಗಲಿ ಸಕಾಲಕ್ಕೆ ಮಳೆಯಾಗಿ ಹೊಳೆ – ಹಳ್ಳಗಳು ತುಂಬಿ ಹರಿಯಲಿ,ಅನ್ನದಾತ ರೈತರ ಬಾಳು ಬಂಗಾರವಾಗಲಿ,ದರ್ಶನ ಪಡೆದ ರಾಜಕೀಯ ಗಣ್ಯರು,ವಿಶೇಷ ಸಾದಕರು, ಯಶಸ್ವಿ ಮಾನ್ಯತೆ ಪಡೆದು ನಾಡಿನ ಸೇವೆ ಮಾಡುವ ಭಾಗ್ಯ ಅಭಿವೃಧ್ಧಿಸಲಿ. ಎಂದು ಶುಭ ಆಸಿರ್ವಾದ ದಯಪಾಲಿಸಿ, ಶುಭ ಹಾರೈಸಿ ಆದ್ಯಾತ್ಮದ ಅರಿವಿಲ್ಲದ ಮನುಷ್ಯ ತನ್ನ ಇರುವಿಕೆಯೇ ಸರಿ ಎಂದು ಭಾವಿಸಿದರೆ ನಸೆಯಲ್ಲಿರುವ ವ್ಯಕ್ತಿಗೆ ಕೊಳಚೆ- ಗಟಾರವೇ ಅರಮನೆಯಂತೆ ಕಾಣುವದು,ಅದಿಕಾರ ಮದ,ಹಣದ ಮದ ಇರುವವಗೆ ಜ್ಞಾನದ ಹಾಗೂ ಆದ್ಯಾತ್ಮದ ಬೆಕಿನ ಮಹತ್ವ ತಿಳಿಯದು,ಅಹಂಕಾರ ಯಾರಿಗೂ ಭೂಷಣವಲ್ಲ,”ಹೂವು ಪರಿಮಳವನ್ನು ಕೇಳಿ ಹಂಚುವದಿಲ್ಲ, ನದಿಯು ತನ್ನ ನೀರನ್ನು ಹನಿ ಹನಿಯಾಗಿ ಎಣಿಸಿ ಹರಿಯುವದಿಲ್ಲ, ಒಳ್ಳೆಯ ಸಾದಕ ಯಾರ ಬರುವಿಕೆಗಾಗಿ ಕಾಯುದಿಲ್ಲ,ಬಂದವರಿಗೆ ಶುಭ ಹಾರೈಸದೆ ಇರುವುದಿಲ್ಲ, ಯಲ್ಲದಕ್ಕೂ ಸಾದಕನ ಮೌನವೇ ಲೋಕಕ್ಕೆ ಅತಿ ಸುಂದರ. ಬಾಳಿನ ದಾರಿಯಲ್ಲಿ ನೆರಳುಗಳು ಉದ್ದವಾದಗಲೂ, ಬೆಳಕಿನ ಮೇಲಿನ ನಂಬಿಕೆಯನ್ನು ಮನುಷ್ಯ ಕಳೆದುಕೊಳ್ಳಬಾರದು, ಸತ್ಯದ ಹೆಜ್ಜೆಗಳು ನಿಧಾನವಾಗಿದ್ದರೂ,ಗುರಿ ಮುಟ್ಟುವದು ಬಹು ಬೇಗ, ಎಂಬ ನಂಬಿಕೆ ಇಟ್ಟು ನಡೆದವಗೆ ಆಧ್ಯಾತ್ಮಿಕತೆಯ ಬಲ, ಗುರು ಬಲ ಸದಾಕಾಲ ಇರುವದೆಂದು ಆಸಿರ್ವಚನ ನೀಡುತ್ತ ಶ್ರೀಮಠದಲ್ಲಿ ಚಾತುರ್ಮಾಸ ಜಲದೇವತಾ ಕುಂಭ ಪೂಜಾ ಪ್ರಾರಂಬಿಸಿದರು. ಕಾರ್ಯಕ್ರಮದಲ್ಲಿ ಕೊಲ್ಹಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಉಪಸ್ತಿತರಾಗಿದ್ದರು.

































